ಜಿಲ್ಲೆ

ಗುರಿಯೊಂದಿಗೆ ಪ್ರಯತ್ನ ಮುಖ್ಯ : ಡಾ.ಉಜ್ವಲ್ ಯು.ಜೆ. ಸಲಹೆ

ಸೌಮ್ಯ ಆರ್

ಸುಳ್ಯ: ಕಲಿಕೆಯ ಹಂತದಲ್ಲಿ ಸಾಧನೆಗೊಂದು ಗುರಿ ಇರಿಸಿಕೊಂಡು ಅವಿರತವಾಗಿ ಶ್ರಮಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಕೆವಿಜಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ. ಹೇಳಿದರು.

ಕೆವಿಜಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಆಯೋಜಿಸಲಾದ ಸಾರ್ವಜನಿಕ ಸೇವಾ ಆಯೋಗ ಕಾರ್ಯಾಗಾರದಲ್ಲಿ ಮಾತನಾಡಿದರು.

ಮುಖ್ಯ ತರಬೇತುದಾರ ಮಂಗಳೂರಿನ ಸರ್ವಜ್ಞ ಐ.ಎ.ಎಸ್. ಅಕಾಡೆಮಿ ನಿರ್ದೇಶಕ ಸುರೇಶ್ ಎಂ.ಎಸ್, ಯು.ಪಿ.ಎಸ್.ಸಿ. ಪರೀಕ್ಷೆ ತಯಾರಿ ಬಗ್ಗೆ ಮಾಹಿತಿ ನೀಡಿದರು. ಶಾಲಾ ಸಂಚಾಲಕ ಡಾ.ರೇಣುಕಾ ಪ್ರಸಾದ್ ಶುಭ ಹಾರೈಸಿದರು. ಪ್ರಾಂಶುಪಾಲ ಅರುಣ್ ಕುಮಾರ್, ಆಡಳಿತಾತ್ಮಕ ಸಂಯೋಜನಾಧಿಕಾರಿ ರೇಣುಕಾ ಉತ್ತಪ್ಪ ಭಾಗವಹಿಸಿದ್ದರು. ಕೃತಾರ್ಥ ಪಿ.ಡಿ ಸ್ವಾಗತಿಸಿದರು. ಸಾನ್ವಿ ವಂದಿಸಿದರು. ಅಲಿಸ್ಟ ಸಾರಾ ಕಾರ್ಯಕ್ರಮ ನಿರೂಪಿಸಿದರು.