ಮುದಗಲ್‌ನಲ್ಲಿ ಹಸಿ-ಒಣ ಕಸ ಸಂಗ್ರಹಕ್ಕಾಗಿ ನಿವಾಸಿಗಳಿಗೆ ಪುರಸಭೆ ಅಧ್ಯಕ್ಷೆ ಮಹಾದೇವಮ್ಮ ಗುತ್ತೇದಾರ ಅವರು ಶುಕ್ರವಾರ ಸಾಂಕೇತಿಕವಾಗಿ ಡಸ್ಟ್‌ಬಿನ್ ವಿತರಿಸಿದರು. ಮುಖ್ಯಾಧಿಕಾರಿ ಪ್ರವೀಣ ಬೋಗಾರ, ವ್ಯವಸ್ಥಾಪಕ ಸುರೇಶ ಇದ್ದರು. 
ಜಿಲ್ಲೆ

ಸಾರ್ವಜನಿಕರು ಪ್ರತ್ಯೇಕವಾಗಿ ಕಸ ಹಾಕಲಿ

Kopala - Desk - Eraveni

ಮುದಗಲ್: ಸ್ವಚ್ಛ ಭಾರತ ಅಭಿಯಾನ ಅಡಿ ಪಟ್ಟಣದ ಪ್ರತಿ ಮನೆಗೆ ಹಸಿ ಮತ್ತು ಒಣ ಕಸ ಬೇರ್ಪಡಿಸಲು ಪುರಸಭೆ ಅಧ್ಯಕ್ಷೆ ಮಹಾದೇವಮ್ಮ ಗುತ್ತೇದಾರ ಶುಕ್ರವಾರ ನಿವಾಸಿಗಳಿಗೆ ಎರಡು ಡಸ್ಟ್‌ಬಿನ್ ವಿತರಿಸಿದರು.

ಮುಖ್ಯಾಧಿಕಾರಿ ಪ್ರವೀಣ ಬೋಗಾರ ಮಾತನಾಡಿ, ಪಟ್ಟಣದಲ್ಲಿ 4500 ಮನೆಗಳಿಗೆ ಹಸಿ-ಒಣ ಕಸ ಹಾಕಲು ಡಸ್ಟ್‌ಬಿನ್‌ಗಳನ್ನು ಸಂಚಾಲಕರ ಮೂಲಕ ವಿತರಿಸಲಾಗುತ್ತದೆ. ಸಾಂಕೇತಿಕವಾಗಿ ಸರ್ಕಾರ ನೇಮಿಸಿದ ಸಂಚಾಲಕರಿಗೆ ಹಸಿ ಮತ್ತು ಒಣ ಕಸ ತುಂಬಲು ಎರಡು ಡಸ್ಟ್‌ಬಿನ್ ವಿತರಿಸಲಾಗುತ್ತಿದೆ.

ಪುರಸಭೆಗೆ ಈಗಾಗಲೇ 9000 ಡಸ್ಟ್‌ಬಿನ್ ಬಂದಿದ್ದು, ವಾರ್ಡ್‌ವಾರು ಮನೆಮನೆಗೆ ತೆರಳಿ ವಿತರಿಸಲು ಆದೇಶಿಸಲಾಗಿದೆ. ಮನೆ ಮುಂದೆ ತ್ಯಾಜ್ಯ ವಿಲೇವಾರಿ ವಾಹನ ಬಂದಾಗ ನಿವಾಸಿಗಳು ಹಸಿ-ಒಣ ಕಸ ಪ್ರತ್ಯೇಕವಾಗಿ ಹಾಕಬೇಕು ಎಂದರು. ನೈರ್ಮಲ್ಯಾಧಿಕಾರಿ ಆರೀಫುನ್ನಿಸಾ ಬೇಗಂ, ಪುರಸಭೆ ಸದಸ್ಯೆಅಮೀನಾಬೇಗಂ ಬಾರಿಗಿಡ, ಪ್ರಮುಖರಾದ ಜಯಶ್ರೀ ಜೀಡಿ, ಹನುಮಂತಪ್ಪ ವಾಲ್ಮೀಕಿ, ತಮ್ಮಣ್ಣ ಗುತ್ತೇದಾರ ಇದ್ದರು.