oplus_2229248 
ಜಿಲ್ಲೆ

ಜನಸಂಪರ್ಕ ಸಭೆಯಲ್ಲಿ ಸಮಸ್ಯೆಗಳ ಅನಾವರಣ

ಎಂ.ಎಸ್​.ಹಿರೇಮಠ ಬೆಳಗಾವಿ

ಹಿರೇಬಾಗೇವಾಡಿ: ನಗರ ಪೊಲೀಸ್​ ಆಯುಕ್ತ ಇಡಾ ಮಾರ್ಟಿನ್​ ಮಾರ್ಬನ್ಯಾಂಗ್​ ನೇತತ್ವದಲ್ಲಿ ಶುಕ್ರವಾರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಶಾಂತಿ ಸಭೆ ಮತ್ತು ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಸಮಸ್ಯೆಗಳ ಮಹಾಪೂರವೇ ಹರಿದು ಬಂತು.

ಇಲ್ಲಿಯ ಶಿವಾಲಯ ಮಂಗಲ ಕಾರ್ಯಾಲಯದಲ್ಲಿ ಏರ್ಪಡಿಸಲಾದ ಸಭೆಯಲ್ಲಿ ಮಾತನಾಡಿದ ಕಾದ್ರಿ ದರ್ಗಾದ ಪೀಠಾಧಿಪತಿ ಅಶ್ರ್​ಅಲಿ ಕಾದ್ರಿ, ಹಿರೇಬಾಗೇವಾಡಿಯಲ್ಲಿ ಯಾವುದೇ ಧರ್ಮದ ಹಬ್ಬಗಳು ಬಂದರೂ ನಾವೆಲ್ಲರೂ ಸೇರಿ ಶಾಂತಿ ಸೌಹಾರ್ದದಿಂದ ಆಚರಿಸಿಕೊಂಡು ಬಂದಿದ್ದೇವೆ. ಪೊಲೀಸ್​ ಇಲಾಖೆಯು ಬಹಳಷ್ಟು ಸಹಕಾರ ನೀಡಿದೆ ಎಂದರು.

ಇಲ್ಲಿನ ಕಲ್ಲು ಗಣಿಗಾರಿಕೆಗಾಗಿ ಓಡಾಡುವ ಟಿಪ್ಪರ್​ ವಾಹನಗಳಿಗೆ ಯಾವುದೇ ನಿಯಂತ್ರಣ ಕ್ರಮಗಳಿಲ್ಲ. ಬೇಕಾಬಿಟ್ಟಿಯಾಗಿ ಓಡಾಡುತ್ತ ಅವು ಸಾರ್ವಜನಿಕರ ಜೀವಹಾನಿಗೆ ಕಾರಣವಾಗುತ್ತಿವೆ. ಅಲ್ಲದೆ ರಸ್ತೆಗಳೆಲ್ಲ ಹಾಳಾಗಿದ್ದು, ಅದೆಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪಾದಚಾರಿಗಳು ಸಂಚಾರವು ಕಷ್ಟವಾಗಿದ್ದು, ಅವುಗಳ ಮೇಲೆ ಪೊಲೀಸರು ಬಿಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇತುವೆಗಳಿದ್ದ ಕಡೆಗಳಲ್ಲಿ ವಿದ್ಯುತ್​ ದೀಪಗಳಿಲ್ಲ, ಸರ್ವಿಸ್​ ರಸ್ತೆಯಲ್ಲೂ ಕಗ್ಗತ್ತಲು, ವಾಹನಗಳ ವೇಗ ನಿಯಂತ್ರಿಸಲು ವೇಗ ತಡೆಗಳಿಲ್ಲ, ಕರ್ಕಶವಾದ ಶಬ್ದದೊಂದಿಗೆ ಓಡಾಡುವ ದ್ವಿಚಕ್ರ ವಾಹನ ಸವಾರರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಮತ್ತು ಬಸಾಪುರ ರಸ್ತೆಯ ಬದಿಯ ಜೂಜು ಅಡ್ಡೆಗಳ ಮೇಲೂ ಪೊಲೀಸರ ನಿಯಂತ್ರಣವಿಲ್ಲ ಎಂದು ದೂರಿದರು.

ಆಯುಕ್ತ ಇಡಾ ಮಾರ್ಟಿನ್​ ಮಾತನಾಡಿ, ಆದಷ್ಟು ಬೇಗ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು. ಮುಂಬರುವ ದುರ್ಗಾದೇವಿ, ಪಡಿಬಸವೇಶ್ವರ ಮತ್ತು ಕಾದ್ರಿ ದರ್ಗಾ ಜಾತ್ರೆಗಳನ್ನು ಸೌಹಾರ್ದದಿಂದ ಆಚರಿಸುವಂತೆ ಮನವಿ ಮಾಡಿದರು.

ಎಸಿಪಿ ಬಿ.ಎಂ. ಗಂಗಾಧರ, ಸಿಪಿಐ ಸುಂದರೇಶ ಹೊಳೆನ್ನವರ, ಗ್ರಾಪಂ ಅಧ್ಯೆ ಜಯಶ್ರೀ ಜಪ್ತಿ, ಉಪಾಧ್ಯೆ ಶ್ರುತಿ ಸಿದ್ದನವರ, ಅಡಿವೇಶ ಇಟಗಿ, ಸ್ವಾತಿ ಇಟಗಿ, ಶ್ರೀಕಾಂತ ಮಾದುಭರಮಣ್ಣವರ, ಸಿದ್ದಪ್ಪ ಶಿಂಗಾಡಿ, ಬಿ.ಜಿ. ವಾಲಿಇಟಗಿ, ಅವಿನಾಶ ಎರಗೊಪ್ಪ, ಮಂಜುನಾಥ ಕುಂಬಾರ, ಆನಂದ ನಂದಿ, ಬಸವರಾಜ ತೋಟಗಿ, ಜಗದೀಶ ಪೂಜಾರ ಸೇರಿ ಸುತ್ತಲಿನ ಬಸ್ಸಾಪುರ, ಅರಳೀಕಟ್ಟಿ, ಕೆ.ಕೆ. ಕೊಪ್ಪ, ಹಲಗಾ, ಬಸ್ತವಾಡ, ಕುಕಡೊಳ್ಳಿ, ಭೆಂಡಿಗೇರಿ ಗ್ರಾಮಗಳ ಪಾಲ್ಗೊಂಡರು.