ಸಂಡೂರಿನಲ್ಲಿ ತಹಸೀಲ್ದಾರ್ ಅನಿಲ್ ಕುಮಾರ್‌ಗೆ ಸಿಪಿಐಎಂ ತಾಲೂಕು ಘಟಕ ಬುಧವಾರ ಸಲ್ಲಿಸಿತು. ಪಕ್ಷದ ಕಾರ್ಯದರ್ಶಿ ಎ.ಸ್ವಾಮಿ, ಖಲಂದರ್ ಬಾಷಾ, ಎಂ.ಮಾರಪ್ಪ, ಫಕೀರಪ್ಪ, ಕುಮಾರಸ್ವಾಮಿ ಇತರರಿದ್ದರು. 
ಜಿಲ್ಲೆ

ಸಾರ್ವಜನಿಕ ಆಸ್ತಿಗಳ ಮಾರಾಟ ಕೈಬಿಡಿ

ನರೇಶ್ ಕುಮಾರ್

ಸಂಡೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸಿಪಿಐಎಂ ತಾಲೂಕು ಘಟಕದಿಂದ ತಹಸಿಲ್ದಾರ್ ಅನಿಲ್ ಕುಮಾರ್‌ಗೆ ಬುಧವಾರ ಮನವಿ ಸಲ್ಲಿಸಲಾಯಿತು.

ಪಕ್ಷದ ತಾಲೂಕು ಕಾರ್ಯದರ್ಶಿ ಎ.ಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ಆದಾಯ ಹೆಚ್ಚಿಸಿಕೊಳ್ಳಲು ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನರ ಮೇಲೆ ಆರ್ಥಿಕ ಹೊರೆಯನ್ನು ಹೇರಿದೆ. ಸಾರ್ವಜನಿಕ ಭೂಮಿ ಮಾರಾಟಕ್ಕೆ ಮುಂದಾಗಿರುವುದು ಸಹ ಖಂಡನೀಯ. ಒಕ್ಕೂಟ ಸರ್ಕಾರದಿಂದ ಪಡೆಯಬೇಕಾದ ನ್ಯಾಯಯುತ ತೆರಿಗೆ ಪಾಲು ಮತ್ತು ತೆರಿಗೆ ಬಾಕಿ, ಬರ ಪರಿಹಾರದ ಬಾಕಿ ಪಡೆಯಲು ಮುಂದಾಗಬೇಕು.

ದೊಡ್ಡ ಬಂಡವಾಳದಾರರಿಗೆ ನೀಡುವ ಸಹಾಯಧನ ಕಡಿತಗೊಳಿಸಬೇಕು. ಶ್ರೀಮಂತರ ಮೇಲೆ ತೆರಿಗೆ ವಿಧಿಸಲು ಕ್ರಮವಹಿಸಬೇಕು. ವಾಲ್ಮೀಕಿ ನಿಗಮ ಸೇರಿ ವಿವಿಧ ಇಲಾಖೆಗಳಲ್ಲಿನ ಭ್ರಷ್ಟಾಚಾರದ ಕುರಿತು ತನಿಖೆ ನಡೆಸಬೇಕು. ತೈಲ, ಹಾಲಿನ ಬೆಲೆ ಏರಿಕೆ ಆದೇಶ ಹಿಂಪಡೆಯಬೇಕು.

ಸಾರ್ವಜನಿಕ ಭೂಮಿ, ಮತ್ತಿತರ ಆಸ್ತಿಗಳ ಮಾರಾಟ ಕೈ ಬಿಡಬೇಕು. ಪೂರ್ವ ಪ್ರಾಥಮಿಕ ಶಾಲೆಗಳನ್ನು ಅಂಗನವಾಡಿ ಕೇಂದ್ರಗಳಲ್ಲಿ ಆರಂಭಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು. ಖಾತ್ರಿ ಯೋಜನೆ ಕೂಲಿ ಮೊತ್ತ 424 ರೂ.ಗೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು.