Shivasharane Hemaraddi Mallamma Jayanti 
ಜಿಲ್ಲೆ

ಸಾರ್ವಜನಿಕ ಯೋಜನೆಗೆ ಸಹಕಾರ ಅಗತ್ಯ

ಗಿರೀಶ ಸಗರ

ವಿಜಯಪುರ: ವಿಜಯಪುರ ಜಿಲ್ಲೆಯ ವಿಜಯಪುರ, ಇಂಡಿ ಹಾಗೂ ಬಸವನಬಾಗೇವಾಡಿ ತಾಲೂಕಿನ 702 ಜನವಸತಿಗಳ ಮತ್ತು 5 ಪುರಸಭೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯ (ಡಿಬಿಒಟಿ ಸ್ಕೀಮ್​&1) ಹಾಗೂ ಮುದ್ದೇಬಿಹಾಳ ಹಾಗೂ ಸಿಂದಗಿ ತಾಲೂಕಿನ 343 ಜನವಸತಿಗಳ ಹಾಗೂ 6 ಪುರಸಭೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯ (ಡಿಬಿಒಟಿ ಸ್ಕೀಮ್​&2) ವ್ಯಾಪ್ತಿಯಡಿ ಬರುವ ಪೈಪ್​ಲೈನ್​ ಅಳವಡಿಸುವ ಕಾಮಗಾರಿಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್​ ಸೂಚನೆ ನೀಡಿದ್ದಾರೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾಮಗಾರಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವುದು ಅತ್ಯಂತ ಅವಶ್ಯಕವಾಗಿರುವುದರಿಂದ ಪೈಪ್​ಲೈನ್​ ಕಾಮಗಾರಿ ಭೂಮಿಯ ಆಳದಲ್ಲಿ ಅಳವಡಿಸಲಾಗುವುದರಿಂದ ಭೂಸ್ವಾಧಿನ ಪ್ರಕ್ರಿಯೆ ಅವಶ್ಯಕತೆ ಇಲ್ಲ. ಆದರೆ ಕೆಲವರು ತಕರಾರು ಮಾಡಿ ಕಾಮಗಾರಿ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಈ ಯೋಜನೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಗ್ರಾಮೀಣ ಜನವಸತಿಗಳಿಗೆ ನೀರು ಪೂರೈಸುವ ಹಿತದೃಷ್ಟಿಯಿಂದ ಸಂಬಂಧಿಸಿದ ಅಧಿಕಾರಿಗಳು ಸಾರ್ವಜನಿಕರಿಂದ ಕಾಮಗಾರಿಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳುವ ಮೂಲಕ ಕಾಮಗಾರಿ ಕೈಗೊಳ್ಳಲು ಅವರು ಸೂಚಿಸಿದ್ದಾರೆ.

ಈ ಯೋಜನೆಯಡಿ ಕುಡಿಯುವ ನೀರನ್ನು ಒದಗಿಸುವ ಗುರಿಯನ್ನು ಹೊಂದಿದ್ದು, ಸ್ಥಳಿಯ ಸಮುದಾಯಗಳ ಆರೋಗ್ಯ ಮತ್ತು ಯೋಗೇಮಕ್ಕೆ ಪ್ರಯೋಜನವಾಗುವ ನಿಟ್ಟಿನಲ್ಲಿ ವಿಳಂಬ ಅಥವಾ ಹಸ್ತೇಪವಿಲ್ಲದೇ ಕೆಲಸ ಮುಂದುವರಿಲು ನಿರ್ಣಾಯಕವಾಗಿದೆ. ಯಾವುದೇ ಸ್ಥಳದಲ್ಲಿ ಯಾವುದೇ ವ್ಯಕ್ತಿ ಕಾಮಗಾರಿಗೆ ಅಡ್ಡಿಪಡಿಸುವುದು ಸೇರಿದಂತೆ ಕಾಮಗಾರಿ ನಿಲ್ಲಿಸಲು ಮುಂದಾದರೆ ಅಂಥವರ ಮೇಲೆ ಬಿಎನ್​ಎಸ್​ ಕಲಂ 132 ರನ್ವಯ ಎರಡು ವರ್ಷ ಕಾರಾವಾಸ ಅಥವಾ ದಂಡ, ಬಿಎನ್​ಎಸ್​ 126(1) ರನ್ವಯ ಒಂದು ತಿಂಗಳು ಶಿೆ ಅಥವಾ ಐದು ಸಾವಿರ ರೂಪಾಯಿ ದಂಡ, ಬಿಎನ್​ಎಸ್​ ಕಲಂ 115 (2) ರನ್ವಯ ಒಂದು ವರ್ಷ ಕಾರಾವಾಸ ಅಥವಾ ಹತ್ತು ಸಾವಿರ ರೂಪಾಯಿ ದಂಡ ಬಿಎನ್​ಎಸ್​ ಕಲಂ 118(1) ರನ್ವಯ ಮೂರು ವರ್ಷ ಕಾರಾವಾಸ ಅಥವಾ ಇಪ್ಪತ್ತು ಸಾವಿರ ರೂಪಾಯಿ ದಂಡ, ಬಿಎನ್​ ಎಸ್​ ಕಲಂ 352 ರನ್ವಯ ಎರಡು ವರ್ಷ ಕಾರಾವಾಸ ಅಥವಾ ದಂಡ ಹಾಗೂ ಬಿಎನ್​ಎಸ್​ 351 (2) ಎರಡು ವರ್ಷ ಕಾರಾವಾಸ ಅಥವಾ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ ಪ್ರಾಧಿಕಾರವು ನಿರ್ಧರಿಸಿದಂತೆ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ನಿಯಂತ್ರಿಸುವ ನಿಯಮಗಳಿಗೆ ಅನುಸಾರ ದಂಡ ಅಥವಾ ಇತರ ಕಾನೂನು ಕ್ರಮಗಳು ಒಳಗೊಂಡಿರಲಿವೆ. ಸಾರ್ವಜನಿಕರು ಯೋಜನೆಗೆ ಸಂಪೂರ್ಣ ಸಹಕಾರ ನೀಡಬೇಕು. ಈ ಕುರಿತು ಯಾವುದೇ ಹೆಚ್ಚಿನ ಮಾಹಿತಿಗಾಗಿ ವಿಜಯಪುರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಚೇರಿಗೆ ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.