ರಾಯಚೂರು ಕೊಪ್ಪಳದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಹಾಗೂ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಸಿಎಂ ಸಿದ್ದರಾಮಯ್ಯಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲೆಯಿಂದ 250 ಬಸ್‌ಗಳು ಕಳುಹಿಸಿದ್ದರಿಂದ ಸಾರ್ವಜನಿಕರಿಗೆ ಬಸ್‌ಗಳಿಲ್ಲದೆ ಪರದಾಟಿದರು.
ಬಸ್‌ಗಳಿಲ್ಲದೆ ದಿನನಿತ್ಯ ಕೆಲಸ ಕಾರ್ಯಗಳಿಗೆ ಓಡಾಡುವ, ಗ್ರಾಮೀಣ ಪ್ರದೇಶದಿಂದ ಆಗಮಿಸಿದ ಜನರಿಗೆ, ಕಾಲೇಜು ವಿದ್ಯಾರ್ಥಿಗಳು, ನೌಕರರು, ಕಾರ್ಮಿಕರು ಬಸ್‌ಗಳಿಲ್ಲದೇ ತಮ್ಮ ತಮ್ಮ ಊರುಗಳಿಗೆ ತೆರಳಲು ಹೆಣಗಾಡಿದರು. ರಾಯಚೂರು ಡಿಪೋದಿಂದ ಹೆಚ್ಚುವರಿ ಬಸ್‌ಗಳನ್ನು ತರಿಸಿ, ಟ್ರಿಪ್‌ಗೆ ಬಿಡಲಾದರೂ, ಹೆಚ್ಚಿದ ಪ್ರಯಾಣಿಕರ ಸಂಖ್ಯೆಯಿಂದ ಅವುಗಳು ಕೂಡ ಭರ್ತಿಯಾಗಿ. ಪ್ರಯಾಣಿಕರು ಬಸ್ಸಿನ ಬಾಗಿಲು ಬಳಿ ನಿಂತು ಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಯಿತು.
ಸುತ್ತಮುತ್ತಲಿನ ಗ್ರಾಮಗಳಿಂದ ಸಂತೆ ಮಾಡಲು ಜನರು ನಗರಕ್ಕೆ ಆಗಮಿಸಿದ್ದರಿಂದ ಜನಸಂದಣಿ ಹೆಚ್ಚಾಗಿದ್ದು, ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಜನರು ಕಾದು ಕುಳಿತ್ತಿದ್ದರು. ರಾಯಚೂರು-ಸಿಂಧನೂರು, ಹಾಗೂ ರಾಯಚೂರು ಲಿಂಗಸುಗೂರು ಮಾರ್ಗದ ಬಸ್‌ಗಳ ಕೊರತೆ ಹೆಚ್ಚಾಗಿರುವುದು ಕಂಡುಬಂದಿತು.