ಕೊಪ್ಪಳ ತಾಲೂಕಿನ ಬೇವಿನಾಳ ಕಿಲೋರ್ಸ್ಕರ್​ ಕಂಪನಿಯಲ್ಲಿ ಮಂಗಳವಾರ ಟಕ ವಿಸ್ತರಣೆ ಅಂಗವಾಗಿ ಸಾರ್ವಜನಿಕ ಸಭೆ ನಡೆಯಿತು. ಎಡಿಸಿ ಸಿದ್ರಾಮೇಶ್ವರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಲಯ ಹಿರಿಯ ಪರಿಸರ ಅಧಿಕಾರಿ ಬಿ.ಎಸ್​.ಮುರಳೀಧರ್​, ಪ್ರಾದೇಶಿಕ ಪರಿಸರ ಅಧಿಕಾರಿ ವೈ.ಎಸ್​.ಹರಿಶಂಕರ್​ ಇದ್ದರು. 
ಜಿಲ್ಲೆ

ಪರಿಸರ ಸಾರ್ವಜನಿಕ ಆಲಿಕೆ ಸಭೆ

ಕೊಪ್ಪಳ: ತಾಲೂಕಿನ ಬೇವಿನಳ್ಳಿ ಬಳಿಯ ಕಿಲೋರ್ಸ್ಕರ್​ ಫೆರಸ್​ ಇಂಡಸ್ಟ್ರಿಸ್​ ಲಿಮಿಟೆಡ್​ - ಬೀಡು ಕಬ್ಬಿಣ ಮತ್ತು ಫೌಂಡ್ರಿ ವಿಸ್ತರಣೆ ಯೋಜನೆ ಸಂಬಂಧ ಮಂಗಳವಾರ ಎಡಿಸಿ ಸಿದ್ರಾಮೇಶ್ವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಭೆ ನಡೆಸಲಾಯಿತು.

30 ವರ್ಷಗಳ ಹಿಂದೆ ಬೀಡು ಕಬ್ಬಿಣ ಮತ್ತು ಫೌಂಡ್ರಿ ಘಟಕ ಸ್ಥಾಪಿಸಿದೆ. ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಂಡು ಬೀಡು ಕಬ್ಬಿಣ ಮತ್ತು ಕ್ಯಾಸ್ಟಿಂಗ್ಸ್​ ಉತ್ಪಾದನೆ ಮಾಡಲಾಗುತ್ತಿದೆ. ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ನಿರ್ವಹಿಸುತ್ತಿದ್ದು ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ ಹಾಗೂ ಸಮುದಾಯ ಅಭಿವೃದ್ಧಿಗಾಗಿ ಅನೇಕ ಚಟುವಟಿಕೆಗಳನ್ನು ಮಾಡುತ್ತಿದೆ. ಗ್ರಾಹಕರ ಅಗತ್ಯ ಪೂರೈಸಲು ಪ್ರಸ್ತಾವಿತ ವಿಸ್ತರಣೆ ಹಾಗೂ ಹೊಸ ಯೋಜನೆಗಳ ಸಂಬಂಧ ಪರಿಸರ ಸಾರ್ವಜನಿಕ ಆಲಿಕೆ ಸಭೆ ಆಯೋಜಿಸಿರುವುದಾಗಿ ಕಂಪನಿ ಅಧಿಕಾರಿಗಳು ತಿಳಿಸಿದರು.

ವೈ.ಎಸ್​. ಹರಿಶಂಕರ್​, ಪರಿಸರ ಅಧಿಕಾರಿ ಮಹಮದ್​ ಅಜೀಜ್​, ತಾಂತ್ರಿಕ ಅಧಿಕಾರಿ ಶ್ರೀಕಾಂತ ಯೋಜನೆ ವಿವರಿಸಿದರು. ವಿವಿಧ ಸಂ, ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಕೆಲವರು, ಉದ್ಯೋಗ ಸೃಷ್ಟಿಯಾಗಲಿವೆ. ಸಮುದಾಯ ಅಭಿವೃದ್ಧಿ ಕೆಲಸಗಳಿಂದ ಜನರ ಆರ್ಥಿಕ ಮಟ್ಟ ಹೆಚ್ಚುತ್ತದೆ. ಜಿಲ್ಲೆ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು. ಇನ್ನು ಕೆಲವರು ಬೇಡಿಕೆ ಪಟ್ಟಿ ಸಲ್ಲಿಸಿದರು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಲಯ ಹಿರಿಯ ಪರಿಸರ ಅಧಿಕಾರಿ ಬಿ.ಎಸ್​.ಮುರಳೀಧರ್​, ಪ್ರಾದೇಶಿಕ ಪರಿಸರ ಅಧಿಕಾರಿ ವೈ.ಎಸ್​.ಹರಿಶಂಕರ್​, ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಪಿ.ನಾರಾಯಣ ಇತರರಿದ್ದರು.