ಪಾತಪಾಳ್ಯ: ಡೆಂಘೆ, ಚಿಕೂನ್‌ಗುನ್ಯ, ಮಲೇರಿಯಾ ಸೇರಿ ಸಾಂಕ್ರಾಮಿಕ ರೋಗಗಳ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಎನ್.ನಾಗಮಣಿ ತಿಳಿಸಿದರು.
ಯರ‌್ರಪೆಂಟ್ಲ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡೆಂೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಡೆಂಘೆ, ಮಲೇರಿಯಾ ರೋಗಗಳ ಹತೋಟಿಗೆ ಕೈಗೊಳ್ಳಬೇಕಾದ ಮೊದಲ ಕ್ರಮ ಸೊಳ್ಳೆಗಳ ನಿಯಂತ್ರಣ. ಹಾಗಾಗಿ ತೆರೆದ ನೀರಿನ ತೊಟ್ಟಿ, ಡ್ರಮ್, ಬ್ಯಾರಲ್, ಏರ್‌ಕೂಲರ್‌ಗಳನ್ನು ವಾರಕ್ಕೊಮ್ಮೆ ತಪ್ಪದೇ ಖಾಲಿ ಮಾಡಿ ನಂತರ ಒಣಗಿಸಿ ಮತ್ತೆ ನೀರು ಭರ್ತಿ ಮಾಡಿಕೊಳ್ಳಬೇಕು. ಚರಂಡಿ, ಮಣ್ಣಿನ ಮಡಕೆ, ಟೈರ್‌ಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದರು.
ಇತ್ತೀಚೆಗೆ ಕರೊನಾ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ಜನರು ಜಾಗೃತಿ ವಹಿಸಬೇಕು. ಸೀನುವುದು, ಕೆಮ್ಮುತ್ತಿದ್ದರೆ ಅಂತಹವರಿಂದ ದೂರವಿರಬೇಕು. ಹಸ್ತಲಾಘವ ಮಾಡುವುದು, ಮುಖ ಕೊಟ್ಟು ಮಾತನಾಡುವುದು ಮಾಡಬಾರದು. ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸುವುದು ಒಳ್ಳೆಯದು ಎಂದರು.