ಇಂಡಿಯ ಸಿ.ವಿ. ರಾಮನ್​ ವಿಜ್ಞಾನ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆಯಲ್ಲಿ ಶಹರ ಪೊಲೀಸ್​ ಠಾಣಾ ಉಪನಿರೀಕ ಮಹೇಶ ಸಂಖ ಮಾತನಾಡಿದರು. ಶಿವಾನಂದ ಕಾಮಗೊಂಡ, ವರ್ಧಮಾನ್​ ಮಹಾವೀರ, ಶೈಲೇಶ ಬೀಳಗಿ, ಪ್ರಸನ್ನ ಕುಮಾರ್​ ನಾಡಗೌಡ ಇದ್ದರು. 
ಜಿಲ್ಲೆ

ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ

ಗಿರೀಶ ಸಗರ

ಇಂಡಿ: ಅಪರಾಧ ಕೃತ್ಯಗಳನ್ನು ತಡೆಯುವಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ ಎಂದು ಇಂಡಿ ಶಹರ ಪೊಲೀಸ್​ ಠಾಣಾ ಉಪನಿರೀಕ ಮಹೇಶ ಸಂಖ ಹೇಳಿದರು.

ಪಟ್ಟಣದ ಸಿಂದಗಿ ರಸ್ತೆಯ ಸಿ.ವಿ. ರಾಮನ್​ ವಿಜ್ಞಾನ ಪಿಯು ಕಾಲೇಜಿನಲ್ಲಿ ಪೊಲೀಸ್​ ಇಲಾಖೆಯ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆಯಲ್ಲಿ ಮಾತನಾಡಿದ ಅವರು, ಅಂತರ್ಜಾಲದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ, ಅದರ ನಿವಾರಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಸಂಸ್ಥೆಯ ಸಂಸ್ಥಾಪಕ ಶಿವಾನಂದ ಕಾಮಗೊಂಡ ಮಾತನಾಡಿ, ಪೊಲೀಸರಿಗೆ ನಾವು ಮಾಹಿತಿ ನೀಡಬೇಕು ಅಂದಾಗ ಮಾತ್ರ ಅಪರಾಧಕೃತ್ಯಗಳು ತಡೆಯಲು ಸಾಧ್ಯ ಎಂದರು.

ಆಡಳಿತ ಮಂಡಳಿ ಸದಸ್ಯ ವರ್ಧಮಾನ್​ ಮಹಾವೀರ, ಶೈಲೇಶ ಬೀಳಗಿ, ಪ್ರಸನ್ನ ಕುಮಾರ್​ ನಾಡಗೌಡ, ಸನ್ಮತಿ ಹಳ್ಳಿ, ಶೋಭಾ ನಾರಾಯಣಕರ್​, ಡಾ. ಸೋಮಶೇಖರ್​ ಹುದ್ದಾರ್​, ಶೈಲಜಾ ಜಹಾಗಿರ್ದಾರ ಇತರರಿದ್ದರು.