ಜಿಲ್ಲೆ

ಸಾರ್ವಜನಿಕರ ಸಹಕಾರ ಅಗತ್ಯ

ಸೋಮನಾಥ ರೆಡ್ಡಿ

ನರೇಗಲ್ಲ: ಸಮಾಜದಲ್ಲಿ ಎಲ್ಲರೂ ಶಾಂತಿ, ಸೌಹಾರ್ದತೆ ಹಾಗೂ ಸಾಮರಸ್ಯ ಕಾಪಾಡಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ವಿನಾಯಕ ಮಂಡಳಿಯವರು ನಡೆದುಕೊಳ್ಳಬೇಕು ಎಂದು ಸಿಪಿಐ ಶಿವಾನಂದ ವಾಲಿಕಾರ ಹೇಳಿದರು.

ಪಟ್ಟಣದ ಠಾಣೆಯಲ್ಲಿ ಮಂಗಳವಾರ ಸಂಜೆ ನಡೆದ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ನಿಮಿತ್ತ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ದೇವರ ಹೆಸರಿನಲ್ಲಿ ಪೈಪೋಟಿ, ನಿಯಮಬಾಹಿರ ಧ್ವನಿ ವರ್ಧಕ ಅಳವಡಿಕೆ, ಇಸ್ಪೀಟ್, ಜೂಜಾಟ ಸೇರಿದಂತೆ ಯಾವುದೇ ಅಹಿತಕರ ಘಟನೆಗಳು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಶಾಂತಿ ಪಾಲನೆಗೆ ಸಾರ್ವಜನಿಕರ ಸಹಕಾರ ಅಗತ್ಯ ಹಾಗೂ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಸ್ಥಾಪನೆಗೆ ಸಾರ್ವಜನಿಕರು ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದರು.

ಠಾಣಾಧಿಕಾರಿ ನಾಗರಾಜ ಗಡಾದ, ನಿವೃತ್ತ ಶಿಕ್ಷಕ ಎಂ.ಎಸ್. ಧಡೇಸೂರಮಠ ಮಾತನಾಡಿದರು. ಮೈಲಾರಪ್ಪ ಚಳ್ಳಮರದ, ಸಂತೋಷ ಮಣ್ಣವಡ್ಡರ, ಮಹೇಶ ಶಿವಶಿಂಪರ, ಹನಮಂತಪ್ಪ ದ್ವಾಸಲ, ನಿಂಗನಗೌಡ ಲಕ್ಕನಗೌಡ್ರ, ಶೇಖಪ್ಪ ಜುಟ್ಲ, ಶೇಖಪ್ಪ ಕೆಂಗಾರ, ಎಸ್.ಎ. ಹಿರೇಮಠ, ಎಎಸ್‌ಐ ಶೇಖರ ಹೊಸಳ್ಳಿ ಇದ್ದರು.