ವಿಜಯಪುರ : ಇಲ್ಲಿನ ಬಿಎಲ್ಡಿಇ ಸಂಸ್ಥೆಯ ಶ್ರೀ ಸಂಗನ ಬಸವ ಫಾರ್ಮಸಿ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಎನ್ಎಸ್ಎಸ್ ಟಕ ಹಾಗೂ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿ ವತಿಯಿಂದ ನಗರದ ವಿವಿಧೆಡೆ ಜನಜಾಗೃತಿ ಅಭಿಯಾನದ ಅಂಗವಾಗಿ ಬೀದಿ ನಾಟಕ ಪ್ರದರ್ಶನ ನಡೆಯಿತು.
ಮಂಗಳವಾರ ಶ್ರೀ ಸಿದ್ಧೇಶ್ವರ ದೇವಸ್ಥಾನ, ಗಾಂಧಿ ಚೌಕ್ ಮತ್ತು ಕೇಂದ್ರ ಬಸ್ ನಿಲ್ದಾಣದ ಎದುರು ಫಾರ್ಮಸಿ ಕಾಲೇಜಿನ ಡಿ. ಫಾಮ್ರ್ ವಿದ್ಯಾರ್ಥಿಗಳು ಏಡ್ಸ್ ರೋಗ ತಡೆಗಟ್ಟುವ ವಿಧಾನಗಳು ಹಾಗೂ ಮುಂಜಾಗ್ರತೆ ಕ್ರಮಗಳ ಕುರಿತ ಬೀದಿ ನಾಟಕ ಪ್ರದರ್ಶನ ನೀಡಿ ಜನಜಾಗೃತಿ ಮೂಡಿಸಿದರು.
ಜಿಲ್ಲಾ ಏಡ್ಸ್ ಪ್ರೆವೆನ್ಶನ್ ಆ್ಯಂಡ್ ಕಂಟ್ರೋಲ್ ಯುನಿಟ್ ಸಿಬ್ಬಂದಿ ಬಾಬುರಾವ ತಳವಾರ, ರವಿ ಕಿತ್ತೂರ, ಅರ್ಚನಾ ವಲಕೋಟಿ, ಬಿಎಲ್ಡಿಇ ಫಾರ್ಮಸಿ ಕಾಲೇಜಿನ ಸಿಬ್ಬಂದಿ ಪ್ರಶಾಂತ ಜೋರಾಪೂರ, ಸಂದೀಪ ಉಮರಾಣಿ, ಅಜಯ ಶಹಾಪುರ, ಶಿವರಾಜ ಕಾಪಸೆ, ಡಾ. ಮಲ್ಲಿನಾಥ, ಡಾ. ಚೇತನಕುಮಾರ ಮತ್ತಿತರರಿದ್ದರು.