ತಂಬಾಕು ಮುಕ್ತ ದಿನಾಚರಣೆ ಅಂಗವಾಗಿ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಿತ್ತಿಪತ್ರ ಪ್ರದರ್ಶಿಸುತ್ತಿರುವ ವೈದ್ಯರು. 
ಜಿಲ್ಲೆ

ಬೀದಿ ನಾಟಕದ ಮೂಲಕ ಜನಜಾಗೃತಿ

ಲೋಕೇಶ್ ಮನು. ಡಿ

ಬೇಲೂರು: ತಂಬಾಕು ಮುಕ್ತ ದಿನಾಚರಣೆ ಅಂಗವಾಗಿ ಬೆಂಗಳೂರಿನ ನಿಮಾನ್ಸ್‌ನ ಎಎಚ್‌ಟಿ ಗ್ರಾಮೀಣ ಸಮುದಾಯಗಳ ಸಮಗ್ರ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಗುರುವಾರ ಬೀದಿ ನಾಟಕದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.


ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯ ಮಾನಸಿಕ ಆರೋಗ್ಯ ಬೋಧಕ ಶುಭಾಷ್.ಎಚ್.ಜೆ. ಮಾತನಾಡಿ, ತಂಬಾಕು ಬಳಸುವವರಿಗೆ ಮಾತ್ರ ತೊಂದರೆ ಆಗುವುದಿಲ್ಲ. ತಂಬಾಕು ಬಳಸುವ ವ್ಯಕ್ತಿಯ ಅಕ್ಕಪಕ್ಕದ ಮತ್ತು ಮಕ್ಕಳಿಗೆ ವಿಪರೀತ ಪರಿಣಾಮ ಬೀರಲಿದೆ. ಸಾರ್ವಜನಿಕರು ತಂಬಾಕು ಸೇವನೆಯಿಂದ ಹತ್ತಾರು ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಹೆಚ್ಚಾಗಿ ಮಹಿಳೆಯರು ಬಂಜೆತನ, ಕೂದಲು ಉದುರುವಿಕೆ ಚರ್ಮರೋಗಗಳಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಪುರುಷರು ಹೃದಯಾಘಾತ, ಮೂತ್ರಪಿಂಡ ಸೋಂಕು ಮತ್ತು ಕ್ಯಾನ್ಸರ್‌ಗಳಂತಹ ಭೀಕರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ತಂಬಾಕು ಅಭ್ಯಾಸದಿಂದ ಸೇವನೆ ಮಾಡಿದ ವ್ಯಕ್ತಿಯಲ್ಲದೆ ಅವರ ಕುಟುಂಬವು ಸಹ ಬೀದಿಗೆ ಬರುತ್ತಿದೆ. ಹೀಗಾಗಿ ತಂಬಾಕು ಅಭ್ಯಾಸ ತ್ಯಜಿಸಲು ಬೇಲೂರು ಸರ್ಕಾರಿ ಆಸ್ಪತ್ರೆಯ ಮೊದಲನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 54 ರಲ್ಲಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆ ಸಹಯೋಗದಲ್ಲಿ ತಂಬಾಕು ಮುಕ್ತ ಶಿಬಿರ ಹಮ್ಮಿಕೊಂಡಿದ್ದು, ವ್ಯಸನಿಗಳು ಇಲ್ಲಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬಹುದು ಎಂದರು.


ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಪ್ರಮೋದ್, ವೈದ್ಯಾಧಿಕಾರಿಗಳಾದ ಡಾ.ಸುಧಾ, ಡಾ.ರಾಜೀವ್, ನಿಮಾನ್ಸ್ ಆಸ್ಪತ್ರೆ ವೈದ್ಯೆ ಡಾ.ಲತಾ ಸಿಬ್ಬಂದಿ ಇದ್ದರು.

============