ಹಗರಿಬೊಮ್ಮನಹಳ್ಳಿ ಗುರುಭವನದಲ್ಲಿ ಸಿಡಿಪಿಒ ಇಲಾಖೆಯಿಂದ, 7ನೇ ರಾಷ್ಟ್ರೀಯ ಪೋಷಣ ಮಾಸಾಚರಣೆ ಕಾರ್ಯಕ್ರಮವನ್ನು ಶಾಸಕ ಕೆ.ನೇಮಿರಾಜ ನಾಯ್ಕ ಉದ್ಘಾಟಿಸಿದರು. ತಾಪಂ ಇಒ ಡಾ.ಪರಮೇಶ್ವರಪ್ಪ, ತಹಸೀಲ್ದಾರ್ ಆರ್.ಕವಿತಾ, ಟಿಎಚ್‌ಒ ಪ್ರವೀಣ್ ಕುಮಾರ, ಪುರಸಭೆ ಸದಸ್ಯರಾದ ಜನ್ನು ನಾಗರಾಜ, ದೀಪಕ್ ಸಾ ಕಠಾರೆ, ಬಣಕಾರ ಸುರೇಶ, ಸಿಡಿಪಿಒ ಕಚೇರಿಯ ನಾಗರತ್ನಾ ಇತರರಿದ್ದರು. 
ಜಿಲ್ಲೆ

ಜನಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ

ರುದ್ರಪ್ಪ ವಾಲಿ

ಹಗರಿಬೊಮ್ಮನಹಳ್ಳಿ: ರಾಜ್ಯದಲ್ಲೆಡೆ ಅಂಗನವಾಡಿ ಕೇಂದ್ರಗಳ ಶಿಕ್ಷಕಿಯರು ಮತ್ತು ಸಹಾಯಕಿಯರು ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಕೆ.ನೇಮಿರಾಜ ನಾಯ್ಕ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಮಂಗಳವಾರ ಸಿಡಿಪಿಒ ಕಚೇರಿಯಿಂದ ಹಮ್ಮಿಕೊಳ್ಳಲಾಗಿದ್ದ 7ನೇ ರಾಷ್ಟ್ರೀಯ ಪೋಷಣ ಮಾಸಾಚರಣೆ ಉದ್ಘಾಟಿಸಿ ಮಾತನಾಡಿದರು. ಅಪೌಷ್ಟಿಕ ಮಕ್ಕಳ ಆರೈಕೆ, ಬಾಣಂತಿಯರ ಆರೋಗ್ಯ, ಗರ್ಭಿಣಿಯರ ಆರೈಕೆ ಸೇರಿ ಹಲವರು ಕಾರ್ಯಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲು ಜನಜಾಗೃತಿ ಮೂಡಿಸುವಲ್ಲಿ ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದರು.


ಸಿಡಿಪಿಒ ಬೋರೇಗೌಡ ಮಾತನಾಡಿ, ಪೋಷಣ ಮಾಸಾಚರಣೆ 2018ರಿಂದ ಪ್ರತಿವರ್ಷ ಸೆಪ್ಟೆಂಬರ್‌ನಲ್ಲಿ ನಡೆಯುತ್ತದೆ. ರಕ್ತ ಹೀನತೆ, ಮಕ್ಕಳ ಬೆಳವಣಿಗೆ ಪರಿಶೀಲನೆ, 3-6ವರ್ಷದೊಳಗಿನ ಮಕ್ಕಳ ಪೂರಕ ಅಹಾರ, ಪೋಷಣ ಪಾರದರ್ಶಕ ಆಡಳಿತ ನಿರ್ವಹಣೆಗೆ ತಂತ್ರಜ್ಞಾನದ ಬಳಕೆ, ತಾಯಿಯ ಹೆಸರಲ್ಲಿ ಒಂದು ಗಿಡ ನೆಡುವ ಅಭಿಯಾನ ಶೀರ್ಷಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.