ಜಿಲ್ಲೆ

ಸಾರ್ವಜನಿಕರ ಸಲಹೆಯಂತೆ ಅಭಿವೃದ್ಧಿ - ಅನಿಲ ಬೆನಕೆ

Belagavi

ಬೆಳಗಾವಿ: ಸ್ಥಳೀಯ ನಿವಾಸಿಗಳ ಸಲಹೆ ಪರಿಗಣಿಸಿ ಅಂಬೇಡ್ಕರ್ ಭವನ ಹಾಗೂ ಅಂಬೇಡ್ಕರ್ ವೃತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಕೈಗೊಳ್ಳಲಾಗುವುದು ಎಂದು ಶಾಸಕ ಅನಿಲ ಬೆನಕೆ ಭರವಸೆ ನೀಡಿದ್ದಾರೆ.

ಇಲ್ಲಿನ ಶ್ರೀನಗರದ ಅಂಬೇಡ್ಕರ್ ಭವನ ಹಾಗೂ ವಂಟಮೂರಿ ಕಾಲನಿ ಅಂಬೇಡ್ಕರ್ ವೃತ್ತಕ್ಕೆ ಶನಿವಾರ ಭೇಟಿ ನೀಡಿ, ಸ್ಥಳೀಯರೊಂದಿಗೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಿದರು. ಈಗಾಗಲೇ ನಗರದ ಹಲವೆಡೆ ರಸ್ತೆ, ಚರಂಡಿ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಯಾವುದೇ ಸಮಸ್ಯೆ ಎದುರಾದರೂ ಕೂಡಲೇ ನನ್ನನ್ನು ಸಂಪರ್ಕಿಸಿ ಎಂದು ತಿಳಿಸಿದರು. ಶ್ರೀನಗರ ಹಾಗೂ ವಂಟಮೂರಿ ಕಾಲನಿ ನಿವಾಸಿಗಳಾದ ಶಂಕರ ಹಿರೇಮಠ, ಮಲ್ಲಪ್ಪ ಬೆಳಗಾಂವಕರ್ ಮತ್ತಿತರರು ಹಾಗೂ ಅಧಿಕಾರಿಗಳು ಇದ್ದರು.