ತುಮಕೂರು : ಜಿಲ್ಲೆಯಲ್ಲಿ ದ್ವಿತೀಯ ಪಿಯು ಪರೀಕ್ಷೆಗೆ ನೋಂದಣಿಯಾಗಿದ್ದ 27365 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ನಿರೀಕ್ಷೆಯಂತೆ ಶೇ.100 ಲಿತಾಂಶ ದಾಖಲಾಗಿದೆ. ಸಾಮೂಹಿಕ ತೇರ್ಗಡೆಯಲ್ಲಿ 3336 ಪುನರಾವರ್ತಿತ ಅಭ್ಯರ್ಥಿಗಳಿಗೂ ಅದೃಷ್ಟ ಒಲಿದಿದೆ.
24029 ಹೊಸ ವಿದ್ಯಾರ್ಥಿಗಳು, 3336 ಪುನರಾವರ್ತಿತ ವಿದ್ಯಾರ್ಥಿಗಳು ಒಟ್ಟು 27365 ವಿದ್ಯಾರ್ಥಿಗಳ ಪೈಕಿ 13247 ಬಾಲಕರು, 14118 ಬಾಲಕಿಯರು ತೇರ್ಗಡೆಯಾಗಿದ್ದು ನಿರೀಕ್ಷೆಯಂತೆ ಶೇ.100 ಲಿತಾಂಶ ಎಲ್ಲ ಕಾಲೇಜುಗಳಲ್ಲಿಯೂ ದಾಖಲಾಗಿದೆ. ಫಲಿತಾಂಶ ಎಸ್‌ಎಂಎಸ್ ಮೂಲಕ ವಿದ್ಯಾರ್ಥಿಗಳಿಗೆ ತಲುಪಿದ್ದು 600ಕ್ಕೆ 600 ಅಂಕ ಗಳಿಸಿದವರ ಸಂಪೂರ್ಣ ಪಟ್ಟಿ ಇಂದು ಲಭ್ಯವಾಗಲಿದೆ.
ಕಲಾ ವಿಭಾಗದಲ್ಲಿ ಪರೀಕ್ಷೆಗೆ ನೋಂದಣಿಯಾಗಿದ್ದ 6891, ವಾಣಿಜ್ಯ ವಿಭಾಗದಲ್ಲಿ 11561 ಹಾಗೂ ವಿಜ್ಞಾನ ವಿಭಾಗದಲ್ಲಿ 8913 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ವಿದ್ಯಾರ್ಥಿಗಳು ುಲ್‌ಖುಷ್ ಆಗಿದ್ದಾರೆ. ನಗರ ಪ್ರದೇಶದ 20710 ವಿದ್ಯಾರ್ಥಿಗಳ ಪೈಕಿ 9958 ಬಾಲಕರು, 10752 ಬಾಲಕಿರು ಮತ್ತು ಗ್ರಾಮೀಣ ಭಾಗದ 6655 ವಿದ್ಯಾರ್ಥಿಗಳಿಗೆ 3289 ಬಾಲಕರು, 3366 ಬಾಲಕಿಯರು ಮುಂದಿನ ತರಗತಿಗೆ ಅರ್ಹತೆ ಪಡೆದಿದ್ದಾರೆ.
ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಮಕ್ಕಳು ಪೂರ್ಣಾಂಕ ಪಡೆದಿರುವುದು ಸಂತಸ ತಂದಿದೆ. ಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ನಗರದ ಪಿಯು ಕಾಲೇಜುಗಳ ಬಳಿ ಸಂತಸ ಮನೆಮಾಡಿತ್ತು, ವಿದ್ಯಾರ್ಥಿಗಳು ಮೊಬೈಲ್‌ನಲ್ಲಿಯೇ ಲಿತಾಂಶ ವೀಕ್ಷಿಸಿ ಉಪನ್ಯಾಸಕರ ಜತೆ ಖುಷಿ ಹಂಚಿಕೊಂಡಿದ್ದು ಸಾಮಾನ್ಯವಾಗಿತ್ತು.
ವಿದ್ಯಾವಾಹಿನಿ ಕಾಲೇಜು ವಿದ್ಯಾರ್ಥಿಗಳ ಸಾಧನೆ : ತುಮಕೂರಿನ ವಿದ್ಯಾವಾಹಿನಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಪಡೆದು ಸಾಧನೆ ಮಾಡಿದ್ದಾರೆ. ವಾಣಿಜ್ಯ ವಿಭಾಗದಿಂದ ಇಬ್ಬರು ಹಾಗೂ ವಿಜ್ಞಾನ ವಿಭಾಗದಿಂದ ಒಬ್ಬ ವಿದ್ಯಾರ್ಥಿ 600 ಕ್ಕೆ 600 ಅಂಕಗಳಿಸಿದ್ದಾರೆ. ಕಾಲೇಜಿನ 639 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೆರ್ಗಡೆಯಾಗಿದ್ದು, 182 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 421 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 36 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ಸಿಎ ಮಾಡೋ ಕನಸು : ತುಮಕೂರಿನ ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನಿ ವಿದ್ಯಾರ್ಥಿನಿ ಎಚ್.ಕೆ.ಕೃತಿಕಾಗೆ ಸಿಎ ಮಾಡೋ ಮಹತ್ತರ ಕನಸು. ದ್ವಿತೀಯ ಪಿಯುನಲ್ಲಿ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಗಳಿಸಿರುವ ಕೃತಿಕಾ ತಂದೆ ಎಚ್.ವಿ.ಕೃಷ್ಣಸ್ವಾಮಿ ವೆಟರನರಿ ಇಸ್‌ಸ್ಪೆಕ್ಟರ್. ತಾಯಿ ಜಿ.ಎನ್.ಸವಿತಾ ಗೃಹಿಣಿ. ಎಲ್‌ಕೆಜಿಯಿಂದ 7ನೇ ತರಗತಿವರೆಗೆ ಕುಣಿಗಲ್‌ನಲ್ಲಿ ಓದಿದ ಕೃತಿಕಾ ನಂತರ ತುಮಕೂರಿನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಬಳಿಕ ವಿದ್ಯಾವಾಹಿನಿ ಪಿಯು ಸೇರಿದಳು. ಪ್ರಥಮ ಪಿಯುನಲ್ಲಿ ಉತ್ತಮ ಅಂಕಗಳಿಸಿದ್ದು ಈಗ ಕೈಹಿಡಿಯಿತು. ಮನೆಪಾಠಕ್ಕೆ ಹೋಗಿಲ್ಲ ಎನ್ನುವ ಕೃತಿಕಾಗೆ ತನ್ನ ಸಾಧನೆಗೆ ಪರಿಶ್ರಮವೇ ಕಾರಣವೆನ್ನುವ ಆತ್ಮವಿಶ್ವಾಸ ಇದೆ.
ಗೋಲ್ಡ್ ಸ್ಮಿತ್ ಮಗನ ಚಿನ್ನದಂಥ ಸಾಧನೆ : ಅಕ್ಕಸಾಲಿಗ ಅಪ್ಪ ಎಸ್ಸೆಸ್ಸೆಲ್ಸಿ ಓದಿದ್ದು, ಮಗನಿಗೆ ಚಾರ್ಟಡ್ ಅಕೌಂಟೆಂಟ್ ಆಗೋ ಕನಸು. ತುಮಕೂರಿನ ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ (ಎಸ್‌ಎಂಬಿಎ) ವಿಭಾಗದಲ್ಲಿ 600ಕ್ಕೆ 600 ಅಂಕಗಳನ್ನು ಗಳಿಸಿ ಸಾಧಕರ ಸಾಲಿನಲ್ಲಿ ನಿಂತಿರುವ ಎಸ್.ತರುಣ್, ತಂದೆ ಟಿ.ಎಚ್.ಸತೀಶ್ ಕುಮಾರ್ ಅಕ್ಕಸಾಲಿಗ. ತಾಯಿ ಶ್ರೀದೇವಿ ಗೃಹಿಣಿ. ಎಲ್‌ಕೆಜಿ ಯಿಂದ ಹತ್ತನೇ ತರಗತಿವರೆಗೆ ಚೇತನ ವಿದ್ಯಾಮಂದಿರದಲ್ಲಿ ಓದಿದ ತರುಣ್ ಕಾರ್ಪೋರೇಟ್ ವರ್ಲ್ಡ್‌ನಲ್ಲಿ ಛಾಪು ಮೂಡಿಸಲು ಪಿಯುನಲ್ಲಿ ಆಯ್ಕೆ ಮಾಡಿಕೊಂಡಿದ್ದು ಕಾಮರ್ಸ್. ಪಿಯು ಪರೀಕ್ಷೆ ನಡೆದು ಈ ಅಂಕಗಳಿಸಿದ್ದರೆ ತೃಪ್ತಿ ಇರುತ್ತಿತ್ತು. ಆದರೂ, ಪ್ರಥಮ ಪಿಯುನಲ್ಲಿ ಪರಿಶ್ರಮದ ಓದಿಗೆ ಫಲ ಸಿಕ್ಕಿದೆ ಎನ್ನುತ್ತಾರೆ ತರುಣ್.
ಪೂರ್ವ ನಿರ್ಧಾರಿತವಾದಂತೆ ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿಯೂ ಶೇ.100 ಫಲಿತಾಂಶ ಬಂದಿದೆ, ವಿದ್ಯಾರ್ಥಿಗಳಿಗೆ ನೇರವಾಗಿ ಲಿತಾಂಶ ಲಭ್ಯವಾಗಿರುವುರದರಿಂದ 600ಕ್ಕೆ 600 ಅಂಕ ಪಡೆದಿರುವ ವಿದ್ಯಾರ್ಥಿಗಳ ಮಾಹಿತಿ ಬುಧವಾರ ಲಭ್ಯವಾಗಬಹುದು. ನರಸಿಂಹಮೂರ್ತಿ ಡಿಡಿಪಿಯು, ತುಮಕೂರು