ಮೆಟ್ರಿ ಗ್ರಾಮದ ಗಿರೆಡ್ಡಿ ವಿರೂಪಾಕ್ಷಿ ಪುತ್ರಿ ಜಿ.ಚೈತ್ರಾ 
ಜಿಲ್ಲೆ

ಪಿಯುನಲ್ಲಿ ಫೇಲಾಗಿದ್ದ ವಿದ್ಯಾರ್ಥಿನಿ ಡಿಸ್ಟಿಂಕ್ಷನ್‌ನಲ್ಲಿ ಪಾಸ್; ತಪ್ಪು ತಿದ್ದಿಕೊಂಡ ಪಿಯು ಬೋರ್ಡ್

Ballari

ಕಂಪ್ಲಿ: ಪಿಯು ಬೋರ್ಡ್ ಎಡವಟ್ಟಿನಿಂದ ಫೇಲಾಗಿದ್ದ ವಿದ್ಯಾರ್ಥಿನಿ ಕೊನೆಗೂ ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದಾಳೆ. ತಾಲೂಕಿನ ಮೆಟ್ರಿ ಗ್ರಾಮದ ಗಿರೆಡ್ಡಿ ವಿರೂಪಾಕ್ಷಿ ಪುತ್ರಿ ಜಿ.ಚೈತ್ರಾ ಎಸ್‌ಜಿವಿಎಸ್‌ಎಸ್ ಬಾಲಕಿಯರ ಸರ್ಕಾರಿ ಪಿಯೂ ಕಾಲೇಜಿನ ವಿದ್ಯಾರ್ಥಿನಿ. ಪಿಯು ಪರೀಕ್ಷೆಯಲ್ಲಿ ಕನ್ನಡ 98, ಇತಿಹಾಸ 100, ಅರ್ಥಶಾಸ್ತ್ರ 97, ಬಿಜಿನಸ್ ಸ್ಟಡಿ 91, ಅಕೌಂಟೆನ್ಸಿ 94 ಹಾಗೂ ಇಂಗ್ಲಿಷ್‌ನಲ್ಲಿ 7 ಅಂಕ ಪಡೆದು ಅನುತ್ತೀರ್ಣರಾಗಿದ್ದರು.

ಆದರೆ, ಚೈತ್ರಾಗೆ ಇಂಗ್ಲಿಷ್‌ನಲ್ಲಿ 70ಕ್ಕಿಂತ ಹೆಚ್ಚು ಅಂಕ ಬರುತ್ತದೆ ಎಂದು ಖಚಿತತೆ ಇತ್ತು. ಹೀಗಾಗಿ ಪ್ರಾಚಾರ್ಯ ಎಲ್.ವಾಮದೇವಮೂರ್ತಿ ಗಮನಕ್ಕೆ ತಂದಿದ್ದಾರೆ. ಅವರು ಪಿಯು ಬೋರ್ಡ್ ಅಧಿಕಾರಿಗಳಿಗೆ ಕರೆ ಮಾಡಿ, ಮತ್ತೊಮ್ಮೆ ಪರಿಶೀಲಿಸುವಂತೆ ಮನವಿ ಮಾಡಿದ್ದರು. ಅದರಂತೆ ಭಾನುವಾರ (ಜು.26) ಪಿಯು ಬೋರ್ಡ್‌ನಿಂದ ಅಧಿಕೃತ ಸಂದೇಶ ಬಂದಿದ್ದು, ವಿದ್ಯಾರ್ಥಿ ಇಂಗ್ಲಿಷ್‌ನಲ್ಲಿ 75 ಅಂಕ ಪಡೆದಿದ್ದಾರೆ. ಇದರಿಂದ ಒಟ್ಟು ಅಂಕ 555 ಆಗಿದ್ದು, ಚೈತ್ರಾ ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದಾರೆ. ಎಲ್ಲ ಸ್ನೇಹಿತರು ಪಾಸಾಗಿ ನಾನು ೇಲಾದಾಗ ದುಃಖವಾಗಿತ್ತು. ಆದರೆ ಪರೀಕ್ಷೆ ಚನ್ನಾಗಿಯೇ ಬರೆದಿದ್ದೆ ಪಾಸಾಗುವ ನಂಬಿಕೆ ಇತ್ತು. ಈಗ ಬೋರ್ಡ್‌ನಿಂದ ಸಂದೇಶ ಬಂದಿರುವುದು ಖುಷಿಯಾಗಿದೆ ಎಂದು ಚೈತ್ರಾ ತಿಳಿಸಿದರು.