ಗದಗ: ಪಾಲಕರ ಮತ್ತು ಉಪನ್ಯಾಸಕರ ಕೇಂದ್ರ ಬಿಂದು ವಿದ್ಯಾರ್ಥಿಗಳೇ. ಅವರೇ ಈ ದೇಶದ ಮುಂದಿನ ಜವಾಬ್ದಾರಿಯುತ ಪ್ರಜೆಗಳು. ಅವರನ್ನೇ ಆಸ್ತಿಯನ್ನಾಗಿ ಮಾಡಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿ ಎಂದು ಪ್ರಾಂಶುಪಾಲರಾದ ಪ್ರಶಾಂತ ದೊಡ್ಡಮನಿ ನುಡಿದರು.
ಅವರು ಐಎಮ್‌ಎಸ್ ಏಜ್ಯೂಕೇಶನ ಟ್ರಸ್ಟ್ನವರು ನಡೆಸುತ್ತಿರುವ ಆರ್ಯಭಟ ಸ್ವತಂತ್ರö ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಹಂತವು ಬಹಳ ಪ್ರಮುಖವಾಗಿದ್ದು ಹೆಚ್ಚು ಹೆಚ್ಚು ಸಮಯವನ್ನು ಅವರು ಅಭ್ಯಾಸಕ್ಕೆ ಬಳಸಬೇಕು. ಈ ದಿಸೆಯಲ್ಲಿ ಪಾಲಕರ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ ಎಂದರು.
ಪಾಲಕರ ಸಭೆಯಲ್ಲಿ ಪಾಲಕರಾದ ಶ್ರೀ ಉಮಚಗಿಯವರು, ಶ್ರೀ ಪ್ರಭಣ್ಣ ಪಾಪನಾಶಿ, ಶ್ರೀ ಶಿರೂರ, ಜಗದೀಶ ಗೌರಿಮನಿ ಇನ್ನೂ ಅನೇಕರು ಭಾಗವಹಿಸಿದ್ದರು ಮತ್ತು ಉಪನ್ಯಾಸಕರ ಜೊತೆ ತಮ್ಮ ಮಕ್ಕಳ ಪ್ರಗತಿ ಕುರಿತು ಸಂವಾದ ನಡೆಸಿದರು. ಅನೇಕ ಪಾಲಕರು ತಮ್ಮ ಧನಾತ್ಮಕ ಅನಿಸಿಕೆಗಳನ್ನು ಉಪನ್ಯಾಸಕರ ಜೊತೆ ಹಂಚಿಕೊAಡರು. ಅದರ ಜೊತೆಗೆ ಪಾಲಕರು ಕೆಲವು ಉಪಯುಕ್ತ ಸಲಹೆಗಳನ್ನು ತಿಳಿಸಿದರು. ಕಾಲೇಜು ಪ್ರಾರಂಭವಾಗಿ ಮೂರು ತಿಂಗಳ ಅವಧಿಯಲ್ಲಿ ತಮ್ಮ ಮಕ್ಕಳು ನಾಲ್ಕು ಕಿರು ಪರೀಕ್ಷೆಗಳನ್ನು ಬರೆದು ಒಳ್ಳೆಯ ಅಂಕಗಳನ್ನು ಪಡೆದಿದ್ದಕ್ಕೆ ಮತ್ತು ಸಿಇಟಿ/ನೀಟ್ ಸಲುವಾಗಿ ಹೆಚ್ಚುವರಿ ತರಬೇತಿ ನೀಡುತ್ತಿರುವುದಕ್ಕೆ ಪಾಲಕರು ಸಂತಸ ವ್ಯಕ್ತಪಡಿಸಿದರು.
ಪಾಲಕರ ಸಭೆಯಲ್ಲಿ ಮಾರೆಲ್ ಏಜ್ಯೂಕೇಶನ ಸೊಸೈಟಿಯ ಶ್ರೀ ಶರಣು ಹಾಗೂ ಶ್ರೀಮತಿ ಅಮೃತ ಉಪಸ್ಥಿತರಿದ್ದರು. ಐಎಮ್‌ಎಸ್ ಏಜ್ಯೂಕೇಶನ ಟ್ರಸ್ಟಿನ ಶ್ರೀಮತಿ ಲತಾ, ಶ್ರೀ ಸಂಗಮೇಶ ಎಸ್.ಕೆ. ಹಾಗೂ ಶ್ರೀ ಮಾರುತಿ ಹಾಜರಿದ್ದರು. ಎಲ್ಲ ಉಪನ್ಯಾಸ ವರ್ಗದವರು ಮತ್ತು ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿದ್ದರು. ಶ್ರೀ ಸಾಲಿಮಠ ಸ್ವಾಗತಿಸಿದರು. ಶ್ರೀ ಅಗಸಿಮನಿ ವಂದಿಸಿದರು.