ಜಿಲ್ಲೆ

ಗುರು ಪಂ. ಮೋಹನರಾವ್ ಕಲ್ಯಾಣಪುರಕರ, ಕಥಕ್ ನೃತ್ಯ ಕಲಾ ಕೇಂದ್ರ ಉದ್ಘಾಟನೆ 11ರಂದು

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ದೇಶಪಾಂಡೆನಗರದ ಗುರು ಪಂಡಿತ ಮೋಹನರಾವ್ ಕಲ್ಯಾಣಪುರಕರ ಕಥಕ್ ನೃತ್ಯ ಕಲಾ ಕೇಂದ್ರದ ಉದ್ಘಾಟನೆ ಸಮಾರಂಭ ಆ. 11ರಂದು ಸಂಜೆ 5.30ಕ್ಕೆ ನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಏರ್ಪಡಿಸಲಾಗಿದೆ.

1962ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಪಂ. ಮೋಹನರಾವ್ ಅವರು ಉತ್ತರ ಪ್ರದೇಶ, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದಿಂದಲೂ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ದೆಹಲಿಯ ಸೊಸೈಟಿ ಫಾರ್ ಪ್ರೊಮೊಷನ್ ಆಫ್ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ಹಾಗೂ ಕಲ್ಚರ್ ಅಮಂಗ್ ಯೂತ್ (ಸ್ಪೆಕ್ ಮ್ಯಾಸೇ) ಸಂಸ್ಥೆಯ ರಾಷ್ಟ್ರೀಯ ಚೇರ್ಮನ್ ಆರ್.ಎಂ. ತಿವಾರಿ ಹಾಗೂ ಸಂಗೀತ ನಾಟಕ ಅಕಾಡೆಮಿ ಚೇರ್ಮನ್ ಡಾ. ಸಂಧ್ಯಾ ಪುರೇಚಾ ಅತಿಥಿಗಳಾಗಿ ಪಾಲ್ಗೊಳ್ಳುವರು. ವಿವಿಧ ಕಲಾವಿದರಿಂದ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ.