ಕೇಂದ್ರ ಸರ್ಕಾರ ಕೂಡಲೇ ಶಾಸನ ಹಿಂಪಡೆಯಲಿ
ಬೆಳಗಾವಿ: ಕೇಂದ್ರ ಸರ್ಕಾರವು ಹಿಟ್ ಮತ್ತು ರನ್ ಪ್ರಕರಣಗಳಿಗೆ ಹೊಸ ಕಾನೂನು ಜಾರಿಗೊಳಿಸಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿ ಕರುನಾಡು ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ನೇತೃತ್ವದಲ್ಲಿ ಚಾಲಕರು ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರವು ಅಜಾಗರೂಕ ಚಾಲನೆಯಿಂದ ಡಿಕ್ಕಿ ಹೊಡೆದು ಪೊಲೀಸ್ ಅಥವಾ ಸ್ಥಳೀಯ ಆಡಳಿತಕ್ಕೆ ತಿಳಿಸದೇ ಸ್ಥಳದಿಂದ ಪರಾರಿಯಾಗುವ ಚಾಲಕರಿಗೆ ಹತ್ತು ವರ್ಷ ಜೈಲು ಶಿಕ್ಷೆ ಹಾಗೂ 7 ಲಕ್ಷ ರೂ. ದಂಡ ವಿಧಿಸುವ ಹೊಸ ಕಾಯ್ದೆ ಅವೈಜ್ಞಾನಿಕವಾಗಿದ್ದು, ಕೂಡಲೇ ಈ ಕಾಯ್ದೆಯನ್ನು ಹಿಂಪಡೆಯಬೇಕು. ಈ ಕಾನೂನು ಚಾಲಕರಿಗೆ ಮರಣ ಶಾಸನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧ್ಯಕ್ಷ ಲಕ್ಷ್ಮಣ ನಾಯಿಕ, ರಾಜಶೇಖರ ಹೊಸಮನಿ, ಮಲ್ಲಿಕಾರ್ಜುನ ಬಜೆ, ರವಿ ಕಾಳಿನಟ್ಟಿ, ಶಿವಾನಂದ ಸೊಲಬನ್ನವರ ಇತರರಿದ್ದರು.