ಜಿಲ್ಲೆ

ಮನೋದೈಹಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ

ಪ್ರಶಾಂತ ಹೂಗಾರ

ನಿಪ್ಪಾಣಿ: ಮನೋದೈಹಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ. ಕ್ರೀಡಾಪಟುಗಳು ಕ್ರೀಡಾ ಮನೋಭಾವನೆಯಿಂದ ಪಾಲ್ಗೊಳ್ಳಬೇಕು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಪಿ.ವಿ.ಕಡಗದಕಾಯಿ ಹೇಳಿದರು.

ನಗರದ ವಿಎಸ್‌ಎಂಎಸ್‌ಆರ್‌ಕೆಐಟಿಯ ವಿಎಸ್‌ಎಂ ಕನ್ವೆನ್ಶನ್ ಹಾಲ್‌ನಲ್ಲಿ ವಿಟಿಯು ಹಾಗೂ ವಿಎಸ್‌ಎಂ ಸೋಮಶೇಖರ ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಟಿಯು ಬೆಳಗಾವಿ ವಲಯದ ಪುರುಷರ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡೆಗೆ ಅಡೆತಡೆಯಾಗದಂತೆ ಚಂದ್ರಕಾಂತ ಕೋಠಿವಾಲೆ ಸಾರಥ್ಯದ ವಿದ್ಯಾ ಸಂವರ್ಧಕ ಆಡಳಿತ ಮಂಡಳಿ ಮ್ಯಾಟ್ ನೀಡಿದ್ದು ಶ್ಲಾಘನೀಯ ಎಂದರು.

ವಿಟಿಯು ಪ್ರಾದೇಶಿಕ ನಿರ್ದೇಶಕ ಶಿವಾನಂದ ಸಾರವಡೆ ಮಾತನಾಡಿ, ಕಬಡ್ಡಿ ಆಟದಿಂದ ಸಂಘಟನಾತ್ಮಕ ಗುಣ ಬೆಳೆಯುತ್ತದೆ. ಎದುರಾಳಿಯನ್ನು ಚಾಣಾಕ್ಷತನದಿಂದ ಕಟ್ಟಿಹಾಕುವ ಜ್ಞಾನ ವೃದ್ಧಿಯಾಗುತ್ತದೆ. ಉತ್ತಮ ಆರೋಗ್ಯ ರೂಪಗೊಳ್ಳುತ್ತದೆ ಎಂದರು.

ವಿದ್ಯಾಸಂವರ್ಧಕ ಮಂಡಳದ ಉಪಕಾರ್ಯಾಧ್ಯಕ್ಷ ಪಪ್ಪು ಪಾಟೀಲ ಮಾತನಾಡಿದರು.

ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸಮೀರ್ ಬಾಗೇವಾಡಿ, ಸಂಚಾಲಕ ರುದ್ರಕುಮಾರ ಕೋಠಿವಾಲೆ, ಪ್ರಾಚಾರ್ಯ ಡಾ.ಉಮೇಶ ಪಾಟೀಲ, ದೈಹಿಕ ನಿರ್ದೇಶಕ ಪ್ರವೀಣ ಮಾನೆ, ಪ್ರೊ.ಅಕ್ಷಯ ಯಾದವಾಡ, ಪ್ರೊ.ರೋಹಿತ ಪಾಟೀಲ, ಅನನ್ಯ ಚಿಕ್ಕನಗೌಡರ ಪ್ರಾರ್ಥಿಸಿದರು. ಗಣಿತ ವಿಭಾಗದ ಮುಖ್ಯಸ್ಥ ಡಾ.ಪ್ರಭಾಕರ ಮುತಾಲಿಕದೇಸಾಯಿ, ಪ್ರೊ.ಪ್ರತಿಭಾ ಮಧಾಳೆ ಪರಿಚಯಿಸಿದರು. ನಿತ್ಯಶ್ರೀ ಜೈನ್ ನಿರೂಪಿಸಿದರು