ಹುಬ್ಬಳ್ಳಿ: ಇಲ್ಲಿಯ ಹೆಗ್ಗೇರಿಯ ಆಯುರ್ವೇದ ಕಾಲೇಜ್‌ನಲ್ಲಿ ಪಂಚಕರ್ಮ ವಿಭಾಗದಿಂದ ಜ. 6ರಿಂದ 11ರವರೆಗೆ ಸೋರಿಯಾಸಿಸ್ ಕಾಯಿಲೆಗೆ ಸಂಬಂಧಿಸಿದಂತೆ ತಪಾಸಣೆ ಹಾಗೂ ಸಲಹಾ ಶಿಬಿರ ಏರ್ಪಡಿಸಲಾಗಿದೆ.
ಲಕ್ಷಣಗಳಾದ ಮೊಣಕೈ, ಮೊಣಕಾಲು, ಕೆಳಬೆನ್ನು ಮತ್ತು ತಲೆ-ನೆತ್ತಿಯಲ್ಲಿ ಸಂಭವಿಸುವ ಒಣ ಚರ್ಮ, ಬಿರುಕು ಬಿಟ್ಟ ಚರ್ಮ, ಅದರ ಜತೆಗೆ ತೀವ್ರವಾದ ತುರಿಕೆ, ಚರ್ಮದಿಂದ ಹೊಟ್ಟು ಉದುರುವಿಕೆ ಇತ್ಯಾದಿಗಳಿಂದ ಬಳಲುತ್ತಿರುವ ರೋಗಿಗಳಿಗೆ ವಿಶೇಷ ತಪಾಸಣಾ ಹಾಗೂ ಪರಿಣಾಮಕಾರಿಯಾದ ವಿಶೇಷ ಚಿಕಿತ್ಸೆ ಶಿಬಿರ ನಡೆಯಲಿದೆ. ಬೆಳಗ್ಗೆ 9.30ರಿಂದ ಸಂಜೆ 4.30ರವರೆಗೆ ನಡೆಯಲಿರುವ ಈ ಶಿಬಿರದ ಸದುಪಯೋಗ ಪಡೆಯಬೇಕೆಂದು ಪ್ರಾಚಾರ್ಯ ಡಾ.ಎ.ಎಸ್. ಪ್ರಶಾಂತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.