**ಮಸರಗುಪ್ಪಿ, ಕೋಚರಿ, ಗೋಟೂರು, ಗೌವನಾಳ ಗ್ರಾಮದಲ್ಲಿ ಸರ್ಕಾರಿ ಶಾಲೆಗಳ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮ
ಬೆಳಗಾವಿ: ಸತತ ಪ್ರಯತ್ನ ಮತ್ತು ಧನಾತ್ಮಕ ಚಿಂತನೆ ಜತೆಗೆ ಉನ್ನತ ಗುರಿ ಇಟ್ಟುಕೊಂಡು ವಿದ್ಯಾರ್ಥಿಗಳು ಓದಿನ ಕಡೆಗೆ ಗಮನ ಹರಿಸಬೇಕು ಎಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಹೇಳಿದರು.
ಯಮಕನಮರಡಿ ಮತಕ್ಷೇತ್ರದ ಮಸರಗುಪ್ಪಿ, ಕೋಚರಿ, ಗೋಟೂರು, ಗೌವನಾಳ ಗ್ರಾಮದಲ್ಲಿ ಸರ್ಕಾರಿ ಶಾಲೆಗಳ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಅವರು ಅವರು ಮಾತನಾಡಿದರು.
ಇಂದಿನ ಕಾಲದಲ್ಲಿ ವ್ಯಾಸಂಗಕ್ಕೆ ಮಕ್ಕಳಿಗೆ ಹೆಚ್ಚು ಸವಾಲುಗಳಿಲ್ಲ. ಸೌಕರ್ಯಗಳ ಕೊರತೆಯೂ ಇಲ್ಲ. ಹಾಗಾಗಿ ಓದಿನ ಬಗ್ಗೆ ಹೆಚ್ಚು ಆಸಕ್ತಿವಹಿಸಿ ಯಮಕನಮರಡಿ ಕ್ಷೇತ್ರಕ್ಕೆ ಹಾಗೂ ಬೆಳಗಾವಿ ಜಿಲ್ಲೆಗೆ ಹೆಸರು ತರಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಆಟ ಪಾಠಗಳಲ್ಲಿ ಸಾಧನೆ ಮಾಡುವುದರ ಮೂಲಕ, ನಿಮ್ಮ ಕುಟುಂಬಕ್ಕೆ ಮತ್ತು ಕಾಲೇಜಿಗೆ ಕೀರ್ತಿ ತರಬೇಕಿದೆ ಎಂದ ಅವರು, ಶಾಲೆಯಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಶಿಕ್ಷಕರ ಬಳಿ ಸಮಸ್ಯೆ ಬಗೆಹರಿಸಿಕೊಂಡು ಉತ್ತಮ ಅಭ್ಯಾಸ ಮಾಡಿ ಉತ್ತಮ ಫಲಿತಾಂಶ ತರಬೇಕೆಂದು ಎಂದರು.
ನಂತರ ಮಸರಗುಟ್ಟಿ ಹಾಗೂ ಕೋಚರಿ ಗ್ರಾಮದಲ್ಲಿ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ನೂತನ ಸಮುದಾಯ ಭವನವ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಶಾಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಸದಸ್ಯರು ಹೂಗುಚ್ಚ ನೀಡಿ ಸನ್ಮಾನಿಸಿದರು. ಈ ವೇಳೆ ಇಲಿಯಾಸ್ ಇನಾಂದಾರ, ಮಹಾತೇಶ ಮಗದುಮ್ಮ, ಇಮಲಾ ಕಾಂಬಳೆ, ಹುಕ್ಕೇರಿ ತಾಪಂ ಇಒ ಟಿ.ಆರ್. ಮಲ್ಲಾಡದ, ಗುರು ಹಿರೇಮಠ, ರಾವಸಾಹೇಬ್ ಬಡಮನಿ, ಅನೀಲ ಕಡಲಗಿ, ರಾಜು ಚೌಗಲಾ, ಕೆಂಪಣ್ಣಾ ಪಾಟೀಲ, ಈರಗೌಡಾ ಪಾಟೀಲ, ಭೀಮಗೌಡಾ ಪಾಟೀಲ, ಭೀಮಪ್ಪ ಮನಗುಂಡಿ, ಪ್ರಕಾಶ ಬಸ್ಸಾಪುರಿ, ಎ.ಎಸ್. ಪದ್ಮನವರ ಸೇರಿದಂತೆ ವಿವಿಧ ಗ್ರಾಮದ ಮುಖಂಡರು ಹಾಗೂ ಶಾಲಾ ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಇದ್ದರು.