ಜಿಲ್ಲೆ

ಇತ್ತ ಗಂಡ ಸ್ವಾತಂತ್ರ್ಯ ದಿನದ ಕರ್ತವ್ಯದಲ್ಲಿರುವಾಗಲೇ ಅತ್ತ ಮನೆಯಲ್ಲಿ ಸಾವಿಗೆ ಶರಣಾದ ಬಳ್ಳಾರಿ PSI ಪತ್ನಿ! PSI Wife Death

PSI Wife Death : ಮಾನಸಿಕ ಖಿನ್ನತೆಗೆ ಒಳಗಾಗಿ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಪತ್ನಿಯೊಬ್ಬರು ಸಾವಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಮೃತರನ್ನು ಚೈತ್ರಾ ಎಂದು ಗುರುತಿಸಲಾಗಿದೆ. ಇವರು ಬಳ್ಳಾರಿಯ ಮೋಕಾ ಪೊಲೀಸ್ ಠಾಣೆಯ ಪಿಎಸ್​ಐ ಕಾಳಿಂಗ ಅವರ ಪತ್ನಿ. ಗುರುವಾರ (ಆಗಸ್ಟ್​ 14) ತವರು ಮನೆಯಿಂದ ಗಂಡನ ಮನೆಗೆ ಆಗಮಿಸಿದ್ದ ಚೈತ್ರಾ, ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.

ಚೈತ್ರಾ ಅವರು ಕಳೆದ ಎರಡ್ಮೂರು ವರ್ಷದಿಂದ ಮಾನಸಿಕ ಖಿನ್ನತೆಗಾಗಿ ಚಿಕಿತ್ಸೆ ‌ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಮಾನಸಿಕ ಸಮಸ್ಯೆಯಿಂದ ಬೇಸತ್ತು ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇಂದು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಪಿಎಸ್​ಐ ಕಾಳಿಂಗ ಅವರು ಕರ್ತವ್ಯಕ್ಕೆ ಹಾಜರಾಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ಹಿನ್ನೆಲೆಯಲ್ಲಿ ಚೈತ್ರಾ ಅವರು ನೇಣಿಗೆ ಕೊರಳೊಡ್ಡಿದ್ದಾರೆ.

ಮೃತ ಚೈತ್ರಾ ಅವರು ಗಂಡ, ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಕಾಳಿಂಗ ಮತ್ತು ಚೈತ್ರಾ ಅವರು ವಿಜಯನಗರ ಜಿಲ್ಲೆಯ ಮಲ್ಲಪ್ಪನಗುಡಿ ನಿವಾಸಿಗಳು. ಕಳೆದ ಏಳು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಕಳೆದ ಎರಡು ವರ್ಷದಲ್ಲಿ ಮೃತ ಚೈತ್ರಾ ಮನೆಯಲ್ಲಿ ಸಂಭವಿಸಿದ ಮೂವರನೇ ಸಾವು ಇದಾಗಿದೆ. ಈ ಎಲ್ಲ ಮಾಹಿತಿಯನ್ನು ಬಳ್ಳಾರಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.