ಬೆಂಗಳೂರು: ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಅಕ್ರಮ ನೇಮಕಾತಿ ಹಗರಣದಲ್ಲಿ ಈವರೆಗೆ ಪೊಲೀಸರು ಸೇರಿ 49 ಆರೋಪಿಗಳ ಬಂಧನವಾಗಿದೆ. ಸಿಐಡಿ ತನಿಖೆ ಇನ್ನಷ್ಟು ಆಳಕ್ಕೆ ಹೊಕ್ಕರೆ ನೇಮಕಾತಿ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಕೊರಳಿಗೆ ಅಕ್ರಮ ನೇಮಕಾತಿ ಉರುಳು ಸುತ್ತಿಕೊಳ್ಳುವುದು ನಿಶ್ಚಯವಾಗಿದೆ. ಏತನ್ಮಧ್ಯೆ ಸಿಐಡಿ ನೋಟಿಸ್ ನಂತರವೂ ಓಎಂಆರ್ ಶೀಟ್ನ ಕಾರ್ಬನ್ ಪ್ರತಿ ಕೊಡದ 92 ಅಭ್ಯರ್ಥಿಗಳಿಗೂ ಬಂಧನ ಭೀತಿ ಶುರುವಾಗಿದೆ.
ಕಾರ್ಬನ್ ಪ್ರತಿ ಕೊಡದೆ ಕಳ್ಳಾಟ: ಪಿಎಸ್ಐ ಅಕ್ರಮ ಬೆಳಕಿಗೆ ಬಂದ ಸಂದರ್ಭದಲ್ಲಿ ನೇಮಕಾತಿ ಪಟ್ಟಿಯಲ್ಲಿ ಆಯ್ಕೆಯಾಗಿರುವ 545 ಅಭ್ಯರ್ಥಿಗಳಿಗೂ ಸಿಐಡಿ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದಿತ್ತು. ವಿಚಾರಣೆಗೆ ಹಾಜರಾಗುವ ವೇಳೆ ಓಎಂಆರ್ ಶೀಟ್ನ ಕಾರ್ಬನ್ ಪ್ರತಿ ನೀಡುವಂತೆ ಸೂಚಿಸಲಾಗಿತ್ತು. 545 ಅಭ್ಯರ್ಥಿಗಳ ಪೈಕಿ 453 ಮಂದಿ ಸಿಐಡಿ ನೋಟಿಸ್ಗೆ ಸ್ಪಂದಿಸಿದ್ದಾರೆ. ಉಳಿದ 92 ಮಂದಿಗೆ ಓಎಂಆರ್ ಶೀಟ್ನ ಕಾರ್ಬನ್ ಪ್ರತಿ ಇನ್ನೂ ಸಿಐಡಿಗೆ ಕೊಟ್ಟಿಲ್ಲ. ಕಾರ್ಬನ್ ಪ್ರತಿ ನೀಡದ ಅಭ್ಯರ್ಥಿಗಳಿಗೆ ಸೋಮವಾರದವರೆಗೂ ಗಡುವು ನೀಡಿ, ನಂತರವೂ ಓಎಂಆರ್ ಶೀಟ್ನ ಕಾರ್ಬನ್ ಪ್ರತಿ ಸಲ್ಲಿಸಿದಿದ್ದರೆ ಆರೋಪಿಗಳ ಪಟ್ಟಿಗೆ ಸೇರ್ಪಡೆ ಮಾಡಲು ಸಿಐಡಿ ಚಿಂತನೆ ನಡೆಸಿದೆ. ಹೀಗಾಗಿ ಸಿಐಡಿ ನೋಟಿಸ್ಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದ 92 ಮಂದಿಗೆ ಬಂಧನದ ಭೀತಿ ಎದುರಾಗಿದೆ. ಕಾರ್ಬನ್ ಪ್ರತಿ ಕೊಡದ ಅಭ್ಯರ್ಥಿಗಳ ನಡೆ ಸಿಐಡಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅಕ್ರಮದಲ್ಲಿ ಶಾಮೀಲಾಗಿರುವ ಇನ್ನಷ್ಟು ಜನರ ಬಗ್ಗೆ ಸಿಐಡಿ ಮಾಹಿತಿ ಕಲೆ ಹಾಕುತ್ತಿದೆ. ಸಿಐಡಿ ಬೆನ್ನು ಬಿದ್ದಿರುವುದನ್ನು ಅರಿತು ಕೆಲ
ಆರೋಪಿಗಳು ಮೊಬೈಲ್ ಸ್ವಿಚ್ಡ್ಆ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ.
243 ಅಭ್ಯರ್ಥಿಗಳಿಗೆ ಬಿಗ್ ರಿಲೀಫ್
ನೇಮಕಾತಿ ಪಟ್ಟಿಯಲ್ಲಿ ಆಯ್ಕೆಯಾದ 243 ಅಭ್ಯರ್ಥಿಗಳು ವಿಚಾರಣೆ ವೇಳೆ ಕೊಟ್ಟಿದ್ದ ಓಎಂಆರ್ ಶೀಟ್ನ ಕಾರ್ಬನ್ ಪ್ರತಿಗಳು ಸರಿಯಾಗಿವೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದಿಂದ (ಎ್ಎಸ್ಎಲ್) ವರದಿ ಬಂದಿದೆ. 243 ಅಭ್ಯರ್ಥಿಗಳ ಓಎಂಆರ್ ಪ್ರತಿಯಲ್ಲಿ ಸ್ಪಷ್ಟವಾಗಿವೆ ಎಂಬ ವರದಿ ಸಿಐಡಿ ಕೈ ಸೇರಿದೆ. ಅದರೆ, ಉಳಿದ ಅಭ್ಯರ್ಥಿಗಳ ಓಎಂಆರ್ ವರದಿಗಾಗಿ ಸಿಐಡಿ ಅಧಿಕಾರಿಗಳು ಕಾಯುತ್ತಿದ್ದಾರೆ. ಎ್ಎಸ್ಎಲ್ನಿಂದ ವರದಿ ಬಂದ ಬಳಿಕ ಮತ್ತಷ್ಟು ಅಭ್ಯರ್ಥಿಗಳ ಅಕ್ರಮಗಳು ಬಯಲಾಗುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
12 ಮಂದಿ ವರ್ಗಾವಣೆಗೆ ಸಿದ್ಧತೆ? ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಬೆನ್ನಲ್ಲೆ ಪೊಲೀಸ್ ನೇಮಕಾತಿ ವಿಭಾಗದ ಸರ್ಜರಿಗೆ ಸರ್ಕಾರ ಮುಂದಾಗಿದೆ. 12 ಮಂದಿಯನ್ನು ವರ್ಗಾವಣೆ ಮಾಡಲು ಸಿದ್ಧತೆ ನಡೆದಿದೆ ಎಂದು ತಿಳಿದುಬಂದಿದೆ. ಸದ್ಯ ಕಚೇರಿ ಕರ್ತವ್ಯ ನಿರ್ವಹಣೆಗಾಗಿ 5 ಜನರನ್ನು ವರ್ಗಾವಣೆ ಮಾಡದೆ ಉಳಿಸಿಕೊಳ್ಳಲಾಗಿದೆ. ಖಾಲಿ ಇರುವ 12 ಸ್ಥಾನಕ್ಕೆ ಹೊಸಬರು ಬಂದ ಬಳಿಕ ಈ ಐವರನ್ನೂ ವರ್ಗಾವಣೆ ಮಾಡಲು ಚಿಂತನೆ ನಡೆಸಲಾಗಿದೆ.
ಸಚಿವ ಡಾ. ಅಶ್ವತ್ಥನಾರಾಯಣ ಪರೀಕ್ಷೆ ಬರೆಯದವರಿಗೂ ಸರ್ಟಿಫಿಕೇಟ್ ಕೊಡಿಸಿದ್ದರೆಂದು ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪದ ಬಗ್ಗೆ ಸರ್ಕಾರ ಕೂಡಲೇ ತನಿಖೆ ನಡೆಸಬೇಕು. ಎಚ್ಡಿಕೆ ಮಾಜಿ ಮುಖ್ಯಮಂತ್ರಿ ಆಗಿದ್ದವರು. ಅಂತಹವರು ಖಚಿತ ಆಧಾರ ಇಲ್ಲದೆ ಆರೋಪ ಮಾಡಲು ಸಾಧ್ಯವಿಲ್ಲ. ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಬಿಜೆಪಿ ಹಗರಣಗಳ ಸರಮಾಲೆ. ಪಿಎಸ್ಐ ನೇಮ ಕಾತಿ ಅಕ್ರಮ ಆರಂಭ ಅಷ್ಟೇ.. ಇನ್ನು, ಹತ್ತು ತಿಂಗ ಳಲ್ಲಿ ಹಲವು ಪ್ರಕರಣಗಳು ಹೊರಬರುತ್ತವೆ ಕಾದು ನೋಡಿ. | ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ ಪಿಎಸ್ಐ ನೇಮಕಾತಿ ಮರುಪರೀೆಯಲ್ಲಿ ಅಭ್ಯರ್ಥಿಗಳ ವಯೋಮಿತಿ ಪರಿಗಣಿಸುವುದಿಲ್ಲ, ಹಿಂದಿನ ಅಧಿಸೂಚನೆಯಂತೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳೆಲ್ಲರೂ ಪರೀಕ್ಷೆ ಬರೆಯಬಹುದು. ಕಿಮ್ಮನೆ ರತ್ನಾಕರ ಅವರಂತಹ ಸಿಲ್ಲಿ ರಾಜಕಾರಣಿ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ. ಅವರು ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ದ್ವೀತಿಯ ಪಿಯು ಪರೀೆ ಯಾವ ರೀತಿ ನಡೆದಿತ್ತು ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ, ಈ ಸಂದರ್ಭದಲ್ಲಿ ಕೆಲ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದರು. | ಆರಗ ಜ್ಞಾನೇಂದ್ರ ಗೃಹ ಸಚಿವ
ಸಾಲಿ, ಮೇತ್ರೆ ಸೇರಿ 12 ಪೊಲೀಸರು ಸಸ್ಪೆಂಡ್ ಕಲಬುರಗಿ: ಸಬ್ ಇನ್ಸ್ಪೆಕ್ಟರ್ ನೇಮಕ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ರಾಗಿರುವ ರಾಯಚೂರು ಜಿಲ್ಲೆ ಲಿಂಗಸೂಗೂರು ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ, ಕಲಬುರಗಿ ಜಿಲ್ಲಾ ಪೊಲೀಸ್ ಫಿಂಗರ್ ಪ್ರಿಂಟ್ ವಿಭಾಗದ ಸಿಪಿಐ ಆನಂದ ಮೇತ್ರೆ ಮತ್ತು ಕರ್ತವ್ಯಲೋಪ ಆರೋಪದ ಮೇರೆಗೆ ಇಬ್ಬರು ಪಿಎಸ್ಐ ಸೇರಿ 10 ಪೊಲೀಸರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಸರ್ಕಾರದ ಸೂಚನೆಯಂತೆ ಗೃಹ ಇಲಾಖೆ ಅಧೀನ ಕಾರ್ಯದರ್ಶಿಗಳು ಡಿವೈಎಸ್ಪಿ ಸಾಲಿ ಮತ್ತು ಸಿಪಿಐ ಮೇತ್ರೆ ಅವರನ್ನು ಸಸ್ಪೆಂಡ್ ಮಾಡಿದ್ದು, ಆದೇಶ ಪ್ರತಿಯನ್ನು ಕಲಬುರಗಿ ಎಸ್ಪಿ ಇಶಾ ಪಂತ್ ಮತ್ತು ಪೊಲೀಸ್ ಕಮಿಷನರ್ ಡಾ.ವೈ.ಎಸ್. ರವಿಕುಮಾರ್ ಅವರಿಗೆ ರವಾನಿಸಲಾಗಿತ್ತು.ಕಲಬುರಗಿ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಮತ್ತು ಎಂ.ಎಸ್.ಇರಾನಿ ಕಾಲೇಜು ಕೇಂದ್ರಗಳಲ್ಲಿ ಪಿಎಸ್ಐ ನೇಮಕ ಪರೀಕ್ಷೆ ವೇಳೆ ಕರ್ತವ್ಯಲೋಪ ಎಸಗಿರುವ ಇಬ್ಬರು ಪಿಎಸ್ಐ ಸೇರಿ 10 ಸಿಬ್ಬಂದಿಯನ್ನು ಪೊಲೀಸ್ ಆಯುಕ್ತ ಡಾ.ರವಿಕುಮಾರ್ ಅಮಾನತುಗೊಳಿಸಿ ಶನಿವಾರ ಆದೇಶ ಹೊರಡಿಸಿದ್ದಾರೆ. ಪಿಎಸ್ಐಗಳಾಗಿರುವ ಶ್ರೀಶೈಲಮ್ಮ, ನಜ್ಮಾ ಸುಲ್ತಾನಾ, ಎಎಸ್ಐಗಳಾದ ಶಶಿಕುಮಾರ, ಲತಾ, ಮುಖ್ಯ ಪೇದೆಗಳಾದ ಪಾರುಬಾಯಿ, ಜೈಭೀಮ, ಶರಣಬಸಪ್ಪ, ದಾಮೋಧರ, ಪೇದೆಗಳಾದ ಪ್ರದಿಪ, ರಾಜಶ್ರೀ ಅವರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಡಾ.ರವಿಕುಮಾರ್ ತಿಳಿಸಿದ್ದಾರೆ.
ಕೆಎಸ್ಆರ್ಪಿ ಸಹಾಯಕ ಕಮಾಂಡೆಂಟ್ ಅರೆಸ್ಟ್
ಪಿಎಸ್ಐ ನೇಮಕ ಪರೀಕ್ಷೆ ಅಕ್ರಮದಲ್ಲಿ ಕಿಂಗ್ಪಿನ್ಗಳ ಜತೆಗೆ ಡೀಲ್ ಕುದುರಿಸಿದ್ದ ಕಲಬುರಗಿಯ ಕೆಎಸ್ಆರ್ಪಿ 6ನೇ ಪಡೆಯ ಸಹಾಯಕ ಕಮಾಂಡೆಂಟ್ (ಡಿವೈಎಸ್ಪಿ) ವೈಜನಾಥ ರೇವೂರ ಅವರನ್ನು ಸಿಐಡಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಇವರ ಪತ್ನಿ ಸುನಂದಾ ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಜೈಲರ್ ಆಗಿದ್ದಾರೆ. ಶುಕ್ರವಾರ ಸಂಜೆ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದ ಸಿಐಡಿ ಅಧಿಕಾರಿಗಳು, ಶನಿವಾರ ಮತ್ತಷ್ಟು ವಿಚಾರಣೆ ಮಾಡಿ ಮಾಹಿತಿ ಕಲೆ ಹಾಕಿದ ಬಳಿಕ ಅಕ್ರಮದಲ್ಲಿ ಶಾಮೀಲಾಗಿರುವುದು ಬೆಳಕಿಗೆ ಬರುತ್ತಲೇ ರೇವೂರ ಅವರನ್ನು ಬಂಧಿಸಿ ಜಿಮ್ಸ್ನಲ್ಲಿ ವೈದ್ಯಕಿಯ ತಪಾಸಣೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ 3ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯ ನ್ಯಾಯಾಧೀಶರು, ರೇವೂರ ಅವರನ್ನು ಏಳು ದಿನ ಸಿಐಡಿ ಕಸ್ಟಡಿಗೆ ಒಪ್ಪಿಸಿದರು. ಕಸ್ಟಡಿ ಮುಗಿದ ಬಳಿಕ ಪತ್ನಿ ಜೈಲರ್ ಆಗಿರುವ ಜೈಲಿಗೆ ರೇವೂರ ಶಿಫ್ಟ್ ಆಗಬೇಕಾಗುತ್ತದೆ. ಪತ್ನಿಯೇ ಪತಿಯನ್ನು ಸೆಲ್ನೊಳಗೆ ಹಾಕುವ ಸ್ಥಿತಿ ಬರಲಿದೆ. ರೇವೂರ ಪಿಎಸ್ಐ ನೇಮಕ ಪರೀಕ್ಷೆ ವೇಳೆ ಪರೀಕ್ಷಾ ಕೇಂದ್ರವೊಂದರ ಉಸ್ತುವಾರಿಯಾಗಿದ್ದರು. ಬ್ಲೂಟೂತ್ ಬಳಸಿ ಅಕ್ರಮ ಮಾಡುವುದರ ಕಿಂಗ್ಪಿನ್ ಆರ್.ಡಿ. ಪಾಟೀಲ್ ಜತೆ ನಿಕಟ ಸಂಪರ್ಕದಲ್ಲಿದ್ದರು. ಪರೀಕ್ಷೆ ಕಾಲಕ್ಕೆ ಕಲಬುರಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪರೀಕ್ಷಾ ಕೇಂದ್ರದ ಉಸ್ತುವಾರಿ ವಹಿಸಿದ್ದರು.