ಜಿಲ್ಲೆ

ಪಿಎಸ್ಐ ಕಿರುಕುಳ-ವ್ಯಕ್ತಿ‌ ಆತ್ಮಹತ್ಯೆ

Uttara Kannada - Subash Hegde

ಭಟ್ಕಳ: ವಾಹನ ಅಪಘಾತದ ವಿಷಯದಲ್ಲಿ ಭಟ್ಕಳ ಶಹರ ಠಾಣೆಯ ಪಿಎಸ್‌ಐ ನೀಡಿದ ಕಿರುಕುಳವನ್ನು ಮನಸ್ಸಿಗೆ ಹಚ್ಚಿಕೊಂಡು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಭಟ್ಕಳ ತಾಲೂಕಿನ ಹಸ್ರವಳ್ಳಿಯಲ್ಲಿ ಗುರುವಾರ ನಡೆದಿದೆ.
ಭಟ್ಕಳ ಪಟ್ಟಣದ ಮಣ್ಕುಳಿ ನಿವಾಸಿ ಕಲ್ಮರ್ಗಿಮನೆ ಮಾರುತಿ ನಾಗಪ್ಪ ನಾಯ್ಕ(63) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಬ್ಯಾಂಕ್ ಒಂದರಲ್ಲಿ ಅಟೆಂಡರ್ ಆಗಿ ಕೆಲಸ ಮಾಡಿ ನಿವೃತ್ತರಾಗಿದ್ದರು. ಇವರು ತಮ್ಮ ಹಸ್ರವಳ್ಳಿಯ ಮನೆಯಲ್ಲಿ ಗುರುವಾರ ನಸುಕಿನ ಜಾವ ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅ.18 ರಂದು ಬೈಕ್ ಅಪಘಾತದ ವಿಷಯದಲ್ಲಿ ಭಟ್ಕಳ ಶಹರ ಠಾಣೆಯ ಪಿಎಸ್‌ಐ ಸಾರ್ವಜನಿಕವಾಗಿ ಇವರನ್ನು ನಿಂದಿಸಿ, ವಾಹನದ ಕೀಯನ್ನು ಕಸಿದುಕೊಂಡು ಅವಮಾನಿಸಿದ್ದಾರೆ. ಇದನ್ನೆ ಮನಸ್ಸಿಗೆ ಹಚ್ಚಿಕೊಂಡ ಮಾರುತಿ ನಾಯ್ಕ ತಮ್ಮ ತೋಟದ ಮನೆಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಮಣ್ಕುಳಿ ಸುಬ್ರಾಯ ನಾಗಪ್ಪ ನಾಯ್ಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.