ಸಿರಿಗೇರಿ ಸಮೀಪದ ಎಂ ಸೂಗೂರು ಗ್ರಾಮದಲ್ಲಿ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಡಿ ಮೇಟಿಗಳಿಗೆ 3 ದಿನಗಳ ತರಬೇತಿ ಕಾರ್ಯಾಗಾರವನ್ನು ಗ್ರಾ ಪಂ ಕಾರ್ಯದರ್ಶಿ ಕೆ ಶಿವಮೂರ್ತಿ ಉದ್ಘಾಟಿಸಿದರು. ತಾಪಂ ಸಂಪನ್ಮೂಲ ವ್ಯಕ್ತಿಗಳಾದ ದ್ಯಾವಣ್ಣ , ಹುಸೇನಪ್ಪ ಇತರರಿದ್ದರು. 
ಜಿಲ್ಲೆ

ಅರ್ಹ ಫಲಾನುಭವಿಗಳಿಗೆ ಕೆಲಸ ಒದಗಿಸಿ

ರುದ್ರಪ್ಪ ವಾಲಿ

ಸಿರಿಗೇರಿ: ಸಮೀಪದ ಎಂ ಸೂಗೂರು ಗ್ರಾಮದಲ್ಲಿ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಡಿ ಮೇಟಿಗಳಿಗೆ 3 ದಿನಗಳ ತರಬೇತಿ ಕಾರ್ಯಾಗಾರವನ್ನು ಶನಿವಾರ ಗ್ರಾ ಪಂ ಕಾರ್ಯದರ್ಶಿ ಕೆ ಶಿವಮೂರ್ತಿ ಉದ್ಘಾಟಿಸಿದರು. ನಿಯಮಾನುಸಾರ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾಗುವುದು. ಯೋಜನೆಯು ಅರ್ಹ ಫಲಾನುಭವಿಗಳಿಗೆ ಕೆಲಸ ಒದಗಿಸಬೇಕು ಎಂದರು.

ತಾಪಂ ಸಂಪನ್ಮೂಲ ಅಧಿಕಾರಿ ಸುರೇಶ ಮಾತನಾಡಿ, 25 ರಿಂದ 50 ಜನ ಕೂಲಿ ಕಾರ್ಮಿಕರಿಗೆ ಒಬ್ಬ ಮೇಟಿ ನೇಮಿಸಬೇಕು. ಫಾರ್ಮ 6 ಭರ್ತಿ ಮಾಡಬೇಕು. ಕೂಲಿಕಾರ್ಮಿಕರು ಮಾಡಿದ ಕಾಮಗಾರಿಯ ಅಳತೆಯನ್ನು ಎನ್ ಪಿ ಎಸ್ ಆ್ಯಪ್‌ನಲ್ಲಿ ನಮೂದಿಸಬೇಕು.

ಪ್ರತಿ ಕುಟುಂಬಕ್ಕೆ 100 ದಿನ ಉದ್ಯೋಗ ನೀಡಬೇಕು. ಗಂಡು-ಹೆಣ್ಣಿಗೂ ಸಮಾನ ಕೂಲಿ 349 ರೂ. ನೀಡಬೇಕು. ವೈಯಕ್ತಿಕ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು ಎಂದರು. ಎಂ ಸೂಗುರು, ಮುದ್ದಟನೂರು, ಶಾನುವಾಸಪುರ, ನಡವಿ ಗ್ರಾಪಂ ಒಟ್ಟು 42 ಮೇಟಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.