ಕನಕಪುರ : ನಿವೃತ್ತ ಅಂಗನವಾಡಿ ಕಾರ್ಯಕರ್ತರಿಗೆ 2023ರ ಏಪ್ರಿಲ್ನಿಂದ ಗ್ರಾಚ್ಯುಟಿ (ಉಪಧನ) ನೀಡಲು ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಸರ್ಕಾರ ಉಲ್ಲಂಸಿದೆ ಎಂದು ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಮಹಾ ಮಂಡಳಿ ಆರೋಪಿಸಿದೆ.
ನಗರದ ಕೋಟೆ ಗಣಪತಿ ದೇವಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನಕಪುರ ಟಕದ ಪದಾಧಿಕಾರಿಗಳು, ನಿವೃತ್ತ ಅಂಗನವಾಡಿ ಕಾರ್ಯಕರ್ತರಿಗೆ ಆಗುತ್ತಿರುವ ಅನ್ಯಾಯವನ್ನು ಸರ್ಕಾರ ಗಮನಿಸಿ ಸಿಗಬೇಕಾದ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಮಹಾಮಂಡಳಿ ತಾಲೂಕು ಅಧ್ಯೆ ರಮಾಮಣಿ ಮಾತನಾಡಿ, ನಿವೃತ್ತ ಅಂಗನಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರಿಗೆ ಅನ್ಯಾಯವಾಗದಂತೆ 2011 ರಿಂದ ಗ್ರಾಚ್ಯುಟಿ ನೀಡಬೇಕು, ಸುಪ್ರೀಂಕೋರ್ಟ್ ಆದೇಶದಂತೆ ಇತರೆ ರಾಜ್ಯಗಳು ಪಾಲಿಸಿ 2011 ರಿಂದ ನಿವೃತ್ತಿ ಹೊಂದಿದವರಿಗೆ ಸೌಲಭ್ಯ ನೀಡುತ್ತಿವೆ. ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್ 2023 ಫೆಬ್ರವರಿಯಲ್ಲಿ ಗ್ರಾಚ್ಯುಟಿ ಹಣ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆವಿಗೂ ಹಣ ನೀಡಿಲ್ಲ ಎಂದು ಆರೋಪಿಸಿದರು. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹಿಡುಗಂಟು (ಎನ್ಪಿಎಸ್) ಹಣವನ್ನು 2 ವರ್ಷ ನೀಡಿ ಅದನ್ನು ನಂತರ ಸಂಪೂರ್ಣವಾಗಿ ನಿಲ್ಲಿಸುವ ಮೂಲಕ ನಮ್ಮನ್ನು ಅತಂತ್ರ ಸ್ಥಿತಿಗೆ ತಳ್ಳಲಾಗಿದೆ. ನಮ್ಮಂತೆ 50 ಸಾವಿರ ಮಹಿಳೆಯರಿದ್ದಾರೆ, ಅವರಿಗೆ 200 ಕೋಟಿ ರೂ. ನೀಡಿದ್ದರೂ ನಮಗೆ ಅನುಕೂಲವಾಗುತ್ತದೆ ಎಂದರು.
ಪ್ರಧಾನ ಕಾರ್ಯದರ್ಶಿ ಶಿವಮಾದಮ್ಮ ಮಾತನಾಡಿ, ತಾಲೂಕಿನಲ್ಲಿ 175 ನಿವೃತ್ತರಿದ್ದು, 8 ಕಾರ್ಯಕರ್ತೆಯರು, 30 ಸಹಾಯಕಿಯರಿಗೆ ಅಲ್ಪಸ್ವಲ್ಪ ಹಣ ಬಂದಿದೆ, ಬಿಟ್ಟರೆ ಗ್ರಾಚ್ಯುಟಿ ನೀಡಿಲ್ಲ. ಸುಪ್ರೀಂಕೋರ್ಟ್ 1972ರಿಂದ ನಿವೃತ್ತಿಯಾದ ಎಲ್ಲರಿಗೂ ಕಡ್ಡಾಯವಾಗಿ ಉಪಧನ ನೀಡಬೇಕೆಂದು ತೀರ್ಪು ನೀಡಿದೆ. 2017ರಲ್ಲಿ ಈ ಆದೇಶಂತೆ ನಿರಂತರ ಹೋರಾಟ ಮಾಡುತ್ತಿದ್ದರೂ ಸ್ಪಂದಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ 2023ರಲ್ಲಿ ನಿವೃತ್ತಿಯಾದವರಿಗೆ ಮಾತ್ರ ಹಣ ಜಮಾ ಮಾಡಿದ್ದಾರೆ. ಇನ್ನೂ 20 ಸಾವಿರ ಅಂಗನವಾಡಿ ಕಾರ್ಯಕರ್ತರು ಸಹಾಯಕರಿಗೆ ಸೌಲಭ್ಯ ದೊರೆಯದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಖಜಾಂಚಿ ಪಿ.ನಾಗರತ್ನಮ್ಮ ಮಾತನಾಡಿ, ಬೇಡಿಕೆ ಪರಿಗಣಿಸದಿದ್ದರೆ ಜೂನ್ ಮೊದಲ ವಾರದಲ್ಲಿ ಅರ್ನಿಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲು ರಾಜ್ಯ ಮಹಾಮಂಡಳಿ ತಿರ್ಮಾನಿಸಿದೆ. ಅಷ್ಟರೊಳಗಾಗಿ ನಿವೃತ್ತಿ ಉಪಧನ ಬಿಡುಗಡೆಗೆ ಆದೇಶ ಮಾಡಬೇಕೆಂದು ಒತ್ತಾಯಿಸಿದರು.