ಟೇಕಲ್​ ಹೋಬಳಿಯ ಹುಳದೇನಹಳ್ಳಿ ಗ್ರಾಪಂ ವ್ಯಾಪ್ತಿಯ ಒಬ್ಬಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕುಂದು ಕೊರತೆ ಸಭೆಯಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ, ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯೆ ಪಲ್ಲವಿ ಮಾತನಾಡಿದರು. ತಹಸೀಲ್ದಾರ್​ ಎಂ.ವಿ ರೂಪಾ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ, ಸಹಾಯಕ ನಿರ್ದೇಶಕ ಶಿವಕುಮಾರ್​ ಇದ್ದರು. 
ಜಿಲ್ಲೆ

ಚನ್ನದಾಸರ್​ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸಲಿ

ಕೋಲಾರ ಡೆಸ್ಕ್

ಟೇಕಲ್​ : ಧಾರ್ಮಿಕ, ಸಾಂಸತಿಕ ರಾಯಭಾರಿಗಳಾದ ಚನ್ನದಾಸರ್​ ಸಮುದಾಯ ಸಮಾಜದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ತೀರಾ ಹಿಂದುಳಿದ ಸಮಾಜವಾಗಿದ್ದು, ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿದ್ದಲ್ಲಿ ಅಸ್ತಿತ್ವ ನೆಲೆಸುತ್ತದೆ. ಮಕ್ಕಳಿಗೂ ಶಿಕ್ಷಣ ನೀಡಿ ಸ್ವಾಭಿಮಾನಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಪ.ಜಾತಿ, ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಹೇಳಿದರು.

ಮಾಲೂರು ತಾಲೂಕು ಟೇಕಲ್​ ಹೋಬಳಿಯ ಹುಳದೇನಹಳ್ಳಿ ಗ್ರಾಪಂ ವ್ಯಾಪ್ತಿಯ ಒಬ್ಬಟ್ಟಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಚನ್ನದಾಸರ್​ ಸಮುದಾಯ ಪರ ಧ್ವನಿ ಎತ್ತಿ ಸಾಮಾಜಿಕ ನ್ಯಾಯ ಒದಗಿಸಬೇಕು. ನಿಗಮದ ಅಧ್ಯಕ್ಷರಾಗಿ ಎಸ್​ಸಿ&ಎಸ್​ಟಿ ಅಲೆಮಾರಿಗಳ ಹಿತಾಸಕ್ತಿ ಕಾಪಾಡುವುದು, ಅಲೆಮಾರಿಗಳನ್ನು ಬಳಸಿಕೊಳ್ಳುವ ಸೋದರ ಸಂಘಟನೆಗಳು ನಿಸ್ವಾರ್ಥ ಮನೋಭಾವದಿಂದ ಅವರಿಗೆ ಸವಲತ್ತುಗಳ ಬಗ್ಗೆ ಜಾಗೃತಿ

ಮೂಡಿಸಬೇಕು ಎಂದರು.

ರಾಜ್ಯ ಚನ್ನದಾಸರ್​ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿ.ಚಲಪತಿ ಮಾತನಾಡಿ, ನೂರಾರು ವರ್ಷಗಳಿಂದ ತಂಬೂರಿ ಮಾಡಿ, ಭಿಕ್ಷೆ ಬೇಡಿ, ಚಾವಡಿ ವಠಾರಗಳಲ್ಲಿ ತಮ್ಮ ಜೀವನ ನಡೆಸಿಕೊಳ್ಳುತ್ತಿದ್ದು, ನಮ್ಮ ಸಮುದಾಯಕ್ಕೆ ಸರ್ಕಾರ ಒಂದು ರ್ನಿಧಿಷ್ಟ ಮತ್ತು ಶಾಶ್ವತ ನೆಲೆ ಕಲ್ಪಿಸಬೇಕು. 1,500 ಜನಸಂಖ್ಯೆ ಇರುವ ಸಮುದಾಯವು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಿದೆ. ಆದರೆ ಜಾತಿ ಪ್ರಮಾಣಪತ್ರ ಸಮಸ್ಯೆ ಇದ್ದು, ಹಿಂದೆ ತಹಸೀಲ್ದಾರ್​ ಅವರು ಸಭೆ ನಡೆಸಿ ಕೈಬರಹ ಜಾತಿ ಪ್ರಮಾಣ ಪತ್ರ ನೀಡಿದ್ದರು. ನಂತರದಲ್ಲಿ ಬಂದ ಅಧಿಕಾರಿಗಳು ಸಮುದಾಯದವರನ್ನು ತಪ್ಪುದಾರಿಗೆ ಎಳೆದು ತಾಲೂಕು ಇಲಾಖೆಯ ಅಧಿಕಾರಿಗಳು ದಾಸರು ಎಂದು ಜಾತಿ ಪ್ರಮಾಣ ಪತ್ರ ನೀಡಿದ್ದಾರೆ. ಆದರೆ ಪರಿಶಿಷ್ಟ ಜಾತಿಯಿಂದ ವಂಚಿತರಾಗಿದ್ದು, ಈ ಸಮುದಾಯದ ಕುಂದುಕೊರತೆಗಳು ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ, ಇನ್ನೂ ಹೆಚ್ಚಿನವರು ಗುಡಿಸಲು ಮತ್ತು ಹೆಚ್ಚಿನ ಹೆಂಚಿನ ಮನೆಗಳಲ್ಲಿ ವಾಸವಾಗಿದ್ದು, ಇವರಿಗೆ ನಿವೇಶನ ಹಾಗೂ

ಮನೆಗಳ ಅವಶ್ಯ ಇದೆ ಎಂದರು.

ನಿಗಮದ ಕಾರ್ಯದರ್ಶಿ ಆನಂದ್​, ಗ್ರಾಪಂ ಸದಸ್ಯ ಸೂರ್ಯನಾರಾಯಣರಾವ್​, ದಲಿತ ಸಂಘಟನೆಯ ಸಂಚಾಲಕ ಎಸ್​.ಎಂ. ವೆಂಕಟೇಶ್​, ಅನುಷ್ಠಾನ ಸಮಿತಿ ಸದಸ್ಯ ನಾಗರಾಜ್​, ಮೋಹನ್​ರೆಡಿ, ಕಂದಾಯ ಅಧಿಕಾರಿ ನಾರಾಯಣಸ್ವಾಮಿ, ಪಿಡಿಒ ವೆಂಕಟೇಶ್​, ಚನ್ನದಾಸರ್​ ಸಮುದಾಯದ ಮುಖಂಡ ಒಬ್ಬಟ್ಟಿ ನಾಗರಾಜ್​, ಚನ್ನದಾಸರ್​ ತಾಲೂಕು ಸಂಘದ ಅಧ್ಯಕ್ಷ ಪ್ರಕಾಶ್​, ಉಪಾಧ್ಯಕ್ಷರಾದ ರಮೇಶ್​, ನಾಗರಾಜ್​, ಮುಖಂಡರಾದ ನಾರಾಯಣಸ್ವಾಮಿ, ಮುನಿಯಪ್ಪ, ಲಕ್ಷ್ಮೀನಾರಾಯಣ್​, ತ್ಯಾಗರಾಜ್​, ಸತೀಶ್​, ವೆಂಕಟಾಚಲ, ಶಿವಾನಂದ್​, ಮುನಿಸ್ವಾಮಿ, ರಾಘವೇಂದ್ರ, ಬಾಲಕೃಷ್ಣ ಇದ್ದರು.