ದೇವದುರ್ಗದಲ್ಲಿ ಗ್ರೇಡ್-2 ತಹಸೀಲ್ದಾರ್ ವೆಂಕಟೇಶಗೆ ಜನವಾದಿ ಮಹಿಳಾ ಸಂಘಟನೆ ಮನವಿ ಸಲ್ಲಿಸಿತು. ಪ್ರಮುಖರಾದ ರಮಾ ದೇವಿ, ಚಂದ್ರಕಲಾ, ಸಾವಿತ್ರಿ, ಗುಂಡಮ್ಮ, ಸುನಂದಾ, ರಾಚಮ್ಮ, ಲಕ್ಷ್ಮೀ, ಶಾಂತಾ, ಶರಣಮ್ಮ ಇತರರಿದ್ದರು. 
ಜಿಲ್ಲೆ

ನೊಂದ ಮಹಿಳೆ, ಕುಟುಂಬಕ್ಕೆ ಭದ್ರತೆ ಕಲ್ಪಿಸಿ

ದೇವದುರ್ಗ: ಜಾಲಹಳ್ಳಿಯಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ ಪ್ರಕರಣ ಖಂಡಿಸಿ ಇಲ್ಲಿನ ತಾಲೂಕು ಆಡಳಿತ ಸೌಧ ಮುಂದೆ ಜನವಾದಿ ಮಹಿಳಾ ಸಂಘಟನೆ ಶನಿವಾರ ಪ್ರತಿಭಟನೆ ನಡೆಸಿತು.

ತಾಲೂಕು ಅಧ್ಯಕ್ಷೆ ಶಕುಂತಲಾ ದೇಸಾಯಿ ಮಾತನಾಡಿ, ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಕೃತ್ಯವಿದು. ಘಟನೆಗೆ ಕಾರಣರಾದ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಹೊಡೆಯುವ ಸಂಸ್ಕೃತಿ ಮನುಕುಲಕ್ಕೆ ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ನೊಂದ ಮಹಿಳೆ ಹಾಗೂ ಕುಟುಂಬಕ್ಕೆ ಸೂಕ್ತ ಭದ್ರತೆ ಒಗಿಸಬೇಕು. ಮುಂದೆ ಇಂಥ ಘಟನೆಗಳು ನಡೆಯದಂತೆ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ರಮಾ ದೇವಿ, ಚಂದ್ರಕಲಾ, ಸಾವಿತ್ರಿ, ಗುಂಡಮ್ಮ, ಸುನಂದಾ, ರಾಚಮ್ಮ, ಲಕ್ಷ್ಮೀ, ಶಾಂತಾ, ಶರಣಮ್ಮ ಇತರರಿದ್ದರು.