ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಸಮಿತಿ ಸದಸ್ಯರು ಸಚಿವ ಶಿವರಾಜ ತಂಗಡಗಿಗೆ ಭಾನುವಾರ ಮನವಿ ಸಲ್ಲಿಸಿದರು. ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಸ್ಥಳೀಯ ಘಟಕದ ಪದಾಧಿಕಾರಿಗಳಾದ ಗ್ಯಾನೇಶ ಕಡಗದ್, ಇ.ಅರ್.ಯಲ್ಲಪ್ಪ, ದಾವಲ್‌ಸಾಬ್, ಕೀರಪ್ಪ ಇತರರಿದ್ದರು. 
ಜಿಲ್ಲೆ

ನೌಕರರಿಗೆ ಸೇವಾಭದ್ರತೆ ಒದಗಿಸಿ

ರುದ್ರಪ್ಪ ವಾಲಿ

ಗಂಗಾವತಿ: ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಸಮಿತಿ ಸದಸ್ಯರು ಸಚಿವ ಶಿವರಾಜ ತಂಗಡಗಿಗೆ ಭಾನುವಾರ ಮನವಿ ಸಲ್ಲಿಸಿದರು.

ಭೇಟಿಯಾದ ಸದಸ್ಯರ ನಿಯೋಗ

ಸಚಿವರ ಕಚೇರಿಯಲ್ಲಿ ಭೇಟಿಯಾದ ಸದಸ್ಯರ ನಿಯೋಗ ಹೊರಗುತ್ತಿಗೆ ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.
ಹಲವು ವರ್ಷಗಳಿಂದ ಅಡುಗೆದಾರ, ಅಡುಗೆ ಸಹಾಯಕರು, ಕಾವಲುಗಾರರು, ಸ್ವಚ್ಛತಾಗಾರರು, ಜವಾನರು, ನರ್ಸ್‌ಗಳು, ಡಿ.ಗ್ರೂಪ್ ನೌಕರರು ಸೇವಾಭದ್ರತೆಯಿಲ್ಲದೇ ದುಡಿಯುತ್ತಿದ್ದು, ಕಾರ್ಮಿಕ ಹಕ್ಕುಗಳು ದೊರೆಯುತ್ತಿಲ್ಲ.

ನೌಕರರಿಗೆ ಸೇವಾಭದ್ರತೆ ಒದಗಿಸುವುದು, ಇಲಾಖೆಯಿಂದ ವೇತನ ವಿತರಣೆ, ಕಾನೂನಿನಂತೆ ವಾರ ಮತ್ತು ಹಬ್ಬಗಳ ರಜೆ, ಸಂಬಳದ ಚೀಟಿ, ಸಮಾನ ಕೆಲಸಕ್ಕೆ ಸಮಾನ ವೇತನ, ಪಿಂಚಣಿ ಸೌಲಭ್ಯ ಸೇರಿ ಇತರೆ ಬೇಡಿಕೆ ಈಡೇರಿಸುವಂತೆ ಸಂಘದ ಗೌರವ ಅಧ್ಯಕ್ಷ ನಿತ್ಯಾನಂದ ಸ್ವಾಮಿ ಒತ್ತಾಯಿಸಿದರು.