ಸಿಂಧನೂರಿನ 7ನೇ ವಾರ್ಡ್‌ನಲ್ಲಿ ಶನಿವಾರ ಕೂಲಿಕಾರರ ಕುಟುಂಬಗಳೊಂದಿಗೆ ಸಿಪಿಐ(ಎಂಎಲ್)ರೆಡ್ ಸ್ಟಾರ್ ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ ಚರ್ಚಿಸಿದರು. ಪ್ರಮುಖರಾದ ರಾಜು ನಾಯಕ, ಆಂಜನೇಯ, ಮರಿಯಪ್ಪ, ಹನುಮಂತಮ್ಮ ಇದ್ದರು. 
ಜಿಲ್ಲೆ

ಕೂಲಿಕಾರರ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಿ

ಸಿಂಧನೂರು: ನಗರದ ಸರ್ಕಾರಿ ಆಹಾರ ಗೋದಾಮು ಪಕ್ಕದಲ್ಲಿ ಅಧಿಕೃತವಾಗಿ ನಿರ್ಮಿಸಿಕೊಂಡ ಅಂಗಡಿಗಳನ್ನು ಬಿಟ್ಟು, ಬಡವರ ಗುಡಿಸಲು ತೆರವುಗೊಳಿಸಲು ಅಧಿಕಾರಿಗಳು ನೋಟಿಸ್ ನೀಡಿರುವುದು ಸರಿಯಲ್ಲ ಎಂದು ಸಿಪಿಐ(ಎಂಎಲ್)ರೆಡ್‌ಸ್ಟಾರ್ ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ ಹೇಳಿದರು.

ನಗರದ 7ನೇ ವಾರ್ಡ್‌ನಲ್ಲಿ ಶನಿವಾರ ಕೂಲಿ ಕಾರ್ಮಿಕ ಕುಟುಂಬಗಳ ಸಭೆ ನಡೆಸಿ ಮಾತನಾಡಿದರು. ಬೆಂಗಳೂರು ಭೂ ಕಬಳಿಕೆ ನಿಷೇಧ ನ್ಯಾಯಾಲಯ ಆದೇಶ ನೀಡಿದ ನಂತರ ಸಿಂಧನೂರು ಮುಖ್ಯ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಒತ್ತುವರಿ ತೆರವುಗೊಳಿಸಿದ ಬೆನ್ನಲ್ಲೇ ಈಗ ಆಹಾರ ಗೋದಾಮು ಪಕ್ಕದಲ್ಲಿ 40 ವರ್ಷಗಳಿಂದ ಗುಡಿಸಲು ಕಟ್ಟಿಕೊಂಡು ವಾಸವಿರುವ 12ಕ್ಕೂ ಹೆಚ್ಚು ಕೂಲಿ ಕಾರ್ಮಿಕ ಕುಟುಂಬಗಳನ್ನು ಒಕ್ಕಲೆಬ್ಬಿಸಲು ಜಿಲ್ಲಾ ಆಹಾರ ಇಲಾಖೆ ನೋಟಿಸ್ ನೀಡಿ ಜ.20 ಗಡುವು ನೀಡಿರುವುದು ಖಂಡನೀಯ.

ಅಕ್ರಮವಾಗಿ ನಿರ್ಮಿಸಿಕೊಂಡ ಅಂಗಡಿಗಳಿಗೆ ನೋಟಿಸ್ ನೀಡದೆ, ಬಡವರ ಜೋಪಡಿ ಚಪ್ಪರದ ತಟ್ಟಿಗೆ ಅಂಟಿಸಿರುವುದು ಯಾವ ನ್ಯಾಯ ? ಮೊದಲು ಪುನರ್ವಸತಿ ಕಲ್ಪಿಸಿ ನಂತರ ತೆರವುಗೊಳಿಸಬೇಕೆಂದು ಒತ್ತಾಯಿಸಿದರು.