ಅಳವಂಡಿ ಸಿಪಿಎಸ್ ಶಾಲೆಯಲ್ಲಿ ಕ್ಲಷ್ಟರ್ ಮಟ್ಟದ ಶಾಲೆಯ ಮಕ್ಕಳಿಗೆ ಸರ್ಕಾರ ನೀಡಿದ ಎರಡನೇ ಜೊತೆ ಸಮವಸ್ತ್ರವನ್ನು ಸಿಆರ್‌ಪಿ ವಿಜಯಕುಮಾರ ಟಿಕಾರೆ ಮುಖ್ಯ ಶಿಕ್ಷಕರಿಗೆ ವಿತರಿಸಿದರು. ಮುಖ್ಯ ಶಿಕ್ಷಕರಾದ ಮಾರುತಿ ಕಾತರಕಿ, ನಾರಾಯಣ ಅಂಬೋರೆ, ಪ್ರಮುಖರಾದ ದಾದಾ ಖಲಂದರ್, ಸಿದ್ದಪ್ಪ, ಯಲ್ಲರಡ್ಡಿ ಇತರರಿದ್ದರು 
ಜಿಲ್ಲೆ

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ

Gangavati - Desk - Veeresh S Ullagaddi

ಅಳವಂಡಿ: ಸರ್ಕಾರ ಜಾರಿಗೊಳಿಸಿದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾವಂತರಾಗಬೇಕು ಎಂದು ಸಿಆರ್‌ಪಿ ವಿಜಯಕುಮಾರ ಟಿಕಾರೆ ಹೇಳಿದರು.


ಗ್ರಾಮದ ಕೇಂದ್ರೀಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಳವಂಡಿ ಕ್ಲಷ್ಟರ್ ಮಟ್ಟದ ಶಾಲಾ ಮಕ್ಕಳಿಗೆ ಸರ್ಕಾರ ಉಚಿತವಾಗಿ ನೀಡಿದ ಎರಡನೇ ಜೊತೆ ಸಮವಸ್ತ್ರವನ್ನು ಮುಖ್ಯ ಶಿಕ್ಷಕರಿಗೆ ವಿತರಿಸಿ ಶುಕ್ರವಾರ ಮಾತನಾಡಿದರು.


ಶಿಕ್ಷಕರು ಎಸ್ಡಿಎಂಸಿ, ಜನಪ್ರತಿನಿಧಿಗಳ ಸಹಕಾರ ಪಡೆದು ಪ್ರತಿ ಮಗುವಿನ ಶೈಕ್ಷಣಿಕ ಅಭಿವೃದ್ದಿಗೆ ಆದ್ಯತೆ ನೀಡಬೇಕು. ಶಾಲೆಯಿಂದ ಮಕ್ಕಳು ಹೊರಗುಳಿಯದಂತೆ ನೋಡಿಕೊಳ್ಳಬೇಕು. ಮಕ್ಕಳ ಶಿಕ್ಷಣದ ಪ್ರಗತಿ ಬಗ್ಗೆ ಪಾಲಕರಿಗೆ ಮಾಹಿತಿ ನೀಡಬೇಕು ಎಂದರು.


ಮುಖ್ಯ ಶಿಕ್ಷಕರಾದ ಮಾರುತಿ ಕಾತರಕಿ, ನಾರಾಯಣ ಅಂಬೋರೆ, ಪ್ರಮುಖರಾದ ದಾದಾ ಖಲಂದರ್, ಸಿದ್ದಪ್ಪ, ಯಲ್ಲರಡ್ಡಿ ಇತರರಿದ್ದರು.