ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಗ್ರಾಮೀಣ ಅಂಚೆ ಸೇವಕರ ಸಂಘದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ದೊಡ್ಡಯ್ಯಸ್ವಾಮಿ, ಪದಾಕಾರಿಗಳಾದ ನರಸಿಂಹಾಚಾರ್ಯ, ರಾಮನಗೌಡ, ಹನುಮಂತಪ್ಪ ಮಾವಿನಬಾವಿ, ಮಲ್ಲಯ್ಯ, ಬಸವರಾಜ, ಚೆನ್ನಾರೆಡ್ಡಿ, ಗೋಪಾಲಕೃಷ್ಣ, ಯಲ್ಲಪ್ಪ, ಬೂದೆಯ್ಯಸ್ವಾಮಿ ಇದ್ದರು. 
ಜಿಲ್ಲೆ

ಅಂಚೆ ಸೇವಕರಿಗೆ ಪಿಂಚಣಿ ಸೌಲಭ್ಯ ನೀಡಿ

ರಾಚಯ್ಯ ಸ್ವಾಮಿ

ರಾಯಚೂರು: ಗ್ರಾಮೀಣ ಅಂಚೆ ಸೇವಕರಿಗೆ 8 ಗಂಟೆ ಕೆಲಸ ಹಾಗೂ ಪಿಂಚಣಿ ಸೌಲಭ್ಯ ನೀಡುವಂತೆ ಒತ್ತಾಯಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, 7ನೇ ವೇತನ ಆಯೋಗದ ಕಮಲೇಶಚಂದ್ರ ನೇತೃತ್ವದ ಸಮಿತಿ ಶಿಾರಸ್ಸುಗಳನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಸೇವಾ ಹಿರಿತನ ನೀಡಬೇಕು. ಜಿಡಿಎಸ್ ನೌಕರರಿಗೆ ವಿಶೇಷ ಇನ್‌ಕ್ರಿಮೆಂಟ್ ನೀಡಬೇಕು. ಅವೈಜ್ಞಾನಿಕ ಗುರಿ ನೀಡುವುದು ನಿಲ್ಲಿಸಬೇಕು. ಗುಂಪು ವಿಮೆಯನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು. ಜಿಡಿಎಸ್ ನೌಕರರಿಗೆ ನೀಡುತ್ತಿರುವ ಕಿರುಕುಳ ನಿಲ್ಲಿಸಬೇಕು.
ಗ್ರಾಚ್ಯುಟಿ ಹಣವನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು. 180 ದಿನಗಳ ರಜೆ ಉಳಿಸಿಕೊಳ್ಳು ಅವಕಾಶ ಕಲ್ಪಿಸಬೇಕು. ಅಂಚೆ ಸೇವಕರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ದೊಡ್ಡಯ್ಯಸ್ವಾಮಿ, ಪದಾಕಾರಿಗಳಾದ ನರಸಿಂಹಾಚಾರ್ಯ, ರಾಮನಗೌಡ, ಹನುಮಂತಪ್ಪ ಮಾವಿನಬಾವಿ, ಮಲ್ಲಯ್ಯ, ಬಸವರಾಜ, ಚೆನ್ನಾರೆಡ್ಡಿ, ಗೋಪಾಲಕೃಷ್ಣ, ಯಲ್ಲಪ್ಪ, ಬೂದೆಯ್ಯಸ್ವಾಮಿ, ಪವಿತ್ರಾ ಪಾಟೀಲ್ ಪಾಲ್ಗೊಂಡಿದ್ದರು.