The Eightfold Path of Donation and Puja Festival 
ಜಿಲ್ಲೆ

ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ನೀಡಿ

ಬೀಳಗಿ:ಪೌಷ್ಟಿಕ ಆಹಾರ ಹಾಗೂ ಉತ್ತಮ ಜೀವನ ಶೈಲಿ ಅಳವಡಿಸಿಕೊಂಡು ಎಲ್ಲ ಗರ್ಭಿಣಿಯರು ಆರೋಗ್ಯಕರ ಮಗುವಿಗೆ ಜನ್ಮ ನೀಡಬೇಕು ಎಂದು ಸಿಡಿಪಿಒ ಬಿ.ಜಿ. ಕವಟೇಕರ ಹೇಳಿದರು.ತಾಲೂಕಿನ ಅರಕೇರಿ ಗ್ರಾಮದ ಎಚ್​ಪಿಎಸ್​ ಶಾಲೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡ ರಾಷ್ಟ್ರೀಯ ಪೋಷಣ ಅಭಿಯಾನ ಮಾಸಾಚರಣೆ, ಐಸಿಡಿಎಸ್​ ಯೋಜನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗರ್ಭಿಣಿಯರಿಗೆ ಪ್ರೀತಿಯ ಮುಖಾಂತರ ನೆಮ್ಮದಿ ಕೊಡಬೇಕು. ಸ್ವಾಸ ನಾರಿ, ಸಶಕ್ತ ಕುಟುಂಬ ಧ್ಯೇಯವನ್ನಿಟ್ಟುಕೊಂಡು ನಡೆದ ಸೀಮಂತ, ನಾಮಕರಣ, ಹುಟ್ಟುಹಬ್ಬ ಹಾಗೂ ಮಕ್ಕಳಿಗೆ ಅನ್ನಪ್ರಾಶನ, ಅರಭ್ಯಾಸವನ್ನು ಮಾಡಿಸಲಾಗುತ್ತದೆ ಎಂದರು.ಕನ್ನಡ ಜಾನಪದ ಪರಿಷತ್​ ಜಿಲ್ಲಾಧ್ಯ ಡಿ.ಎಂ. ಸಾವಕಾರ ಮಾತನಾಡಿ, ಸದೃಢ ಕುಟುಂಬ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಹಿರಿದಾಗಿದೆ. ತಾವು ತಯಾರಿಸುವ ಆಹಾರವೇ ಔಷಧಿಯಾಗಿರಬೇಕು. ಜಂಕ್​ುಡ್​ಗಳಿಂದ ದೂರವಿರಬೇಕು ಎಂದು ತಿಳಿಸಿದರು.ಗ್ರಾಪಂ ಅಧ್ಯೆ ಮಹಾದೇವಿ ಕಮ್ಮನ್ನವರ, ಲಕ್ಷಿ$್ಮ ಪೂಜಾರಿ, ವಿಠ್ಠಲ ನಡಗೇರಿ, ಭರಮಪ್ಪ ಬಿಸನಾಳ, ರಂಗವ್ವ ಮಲ್ಲಾರ ಇದ್ದರು.