ಕವಿತಾಳ: ಪಟ್ಟಣದ ಆರಾಧ್ಯ ದೈವ ಶ್ರೀ ತ್ರಯಂಬಕೇಶ್ವರ ಜಾತ್ರೆ ಏ.6ರಂದು ನಡೆಯಲಿದ್ದು, ಬುಧವಾರ ಸಿರವಾರ ತಹಸೀಲ್ದಾರ್ ರವಿ ಅಂಗಡಿ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲೆಯಲ್ಲಿಯೇ ಕವಿತಾಳ ತ್ರಯಂಬಕೇಶ್ವರ ಮತ್ತು ದನಗಳ ಜಾತ್ರೆ ದೊಡ್ಡ ಪ್ರಮಾಣದಲ್ಲಿ ನಡೆಯಲಿದೆ. ಜಾತ್ರೆಗೆ ಬರುವಂತಹ ಭಕ್ತರಿಗೆ ಮೂಲ ಸವಲತ್ತು ಒದಗಿಸುವಂತೆ ಪಪಂ, ಕಂದಾಯ ಅಧಿಕಾರಿಗಳಿಗೆ ತಹಸೀಲ್ದಾರ್ ರವಿ ಸೂಚಿಸಿದರು.
ದೇವಸ್ಥಾನ ಅರ್ಚಕ ಸಿದ್ದಯ್ಯಸ್ವಾಮಿ, ಸಮಿತಿ ಕಾರ್ಯದರ್ಶಿ ವಿಶ್ವನಾಥ ಕಾಮರಡ್ಡಿ, ನಾಡ ತಹಸೀಲ್ದಾರ್ ರಾಜಕುಮಾರ, ಗ್ರಾಮ ಲೆಕ್ಕಾಧಿಕಾರಿ ಸಾದಕ್ಕಲಿ ಇತರರಿದ್ದರು.