ಜೂಗಲ ಮಂಜುನಾಯಕ 
ಜಿಲ್ಲೆ

ಸ್ಮಶಾನಕ್ಕಾಗಿ ಜಮೀನು ಒದಗಿಸಿ

ಗಾಯತ್ರಿ ಮಾಲಿಪಾಟೀಲ್

ಕಂಪ್ಲಿ: ನಗರದ ತಹಸಿಲ್ ಸಭಾಂಗಣದಲ್ಲಿ ಶುಕ್ರವಾರ ತಹಸೀಲ್ದಾರ್ ಜೂಗಲ ಮಂಜುನಾಯಕ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕುಂದು ಕೊರತೆ ಸಭೆ ನಡೆಯಿತು.

ಪಟ್ಟಣದಲ್ಲಿ ಪರಿಶಿಷ್ಟ ವರ್ಗದ ಬಾಲಕಿಯರ ವಸತಿ ನಿಲಯ, ಆಶ್ರಮ ಶಾಲೆ ಆರಂಭಿಸಬೇಕು. ಬೆಳಗೋಡ್‌ಹಾಳ್ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕು. ಪಡಿತರ ಚೀಟಿ ನೀಡುವುದು, ನೆಲ್ಲೂಡಿ-ಕೊಟ್ಟಾಲ್ ಗ್ರಾಮದಲ್ಲಿನ ಪರಿಶಿಷ್ಟ ವರ್ಗದ ಸಮುದಾಯ ಭವನವನ್ನು ಗ್ರಂಥಾಲಯವಾಗಿ ಪರಿವರ್ತನೆ, ಪರಿಶಿಷ್ಟರ ಸ್ಮಶಾನಕ್ಕಾಗಿ ಭೂಮಿ ಹಾಗೂ ಅಗತ್ಯ ಸೌಕರ್ಯ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ಎಸ್ಸಿ, ಎಸ್ಟಿ ಕುಂದುಕೊರತೆ ಸಭೆಯನ್ನು ಗ್ರಾಪಂ ಮಟ್ಟದಲ್ಲಿ ನಡೆಸುವಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಲಹೆ ನೀಡಿದರು.

ತಾಪಂ ಇಒ ಆರ್.ಕೆ.ಶ್ರೀಕುಮಾರ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗಾದಿಲಿಂಗಪ್ಪ, ಸಹಾಯಕ ನಿರ್ದೇಶಕಿ ಬಿ.ರಾಜೇಶ್ವರಿ, ನಿಲಯ ಪಾಲಕ ಕೆ.ವಿರೂಪಾಕ್ಷಿ, ಪಿಡಿಒಗಳು, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.