ಜಿಲ್ಲೆ

ಮಾದಿಗ ಸಮಾಜಕ್ಕೆ ನ್ಯಾಯ ಒದಗಿಸಿ

ಜಿ.ಹೆಚ್. ಧನ್ಯಕುಮಾರ್

ಕಡೂರು: ಪರಿಶಿಷ್ಟಜಾತಿ, ಉಪ ಜಾತಿಗಳಿಗೆ ಒಳಮೀಸಲಾತಿಯ ಪಾಲು ನ್ಯಾಯಯುತವಾಗಿ ಸಿಗಲು ಪೂರಕವಾಗಿ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿ ತಾಲೂಕು ಮಾದಿಗ ಸಮಾಜ, ಮಾದಿಗ ಶ್ರೇಯೋಭಿವೃದ್ಧಿ ಟ್ರಸ್ಟ್ ಹಾಗೂ ವಿವಿಧ ದಲಿತ ಸಂಘಟನೆಗಳ ಸದಸ್ಯರು ಬೆಂಗಳೂರಿನಲ್ಲಿ ಏಕಸದಸ್ಯ ವಿಚಾರಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ನಾಗಮೋಹನ್ ದಾಸ್‌ಗೆ ಮನವಿ ಸಲ್ಲಿಸಿದರು.

ಕರ್ನಾಟಕ ಬ್ಲೂ ಆರ್ಮಿ ಮಾದಿಗರ ಧ್ವನಿ ಸಂಘಟನೆ ರಾಜ್ಯಾಧ್ಯಕ್ಷ ಶೂದ್ರ ಶ್ರೀನಿವಾಸ್ ಮಾತನಾಡಿ, ಮಾದಿಗರು ನಾವು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಶಿಕ್ಷಣ ಉದ್ಯೋಗ ರಾಜಕೀಯ, ಪ್ರಾತಿನಿಧ್ಯ, ಸ್ವಯಂ ಉದ್ಯೋಗ ಕೃಷಿಯಲ್ಲಿ ಹಿಂದಿದ್ದಾರೆ. ಸದಾಶಿವ ಆಯೋಗದ ವರದಿ ಪ್ರಕಾರ ಒಳಮೀಸಲಾತಿಗೆ ಒಳಪಡುವ ಉಪಜಾತಿಗಳಾದ ಆದಿಕರ್ನಾಟಕ, ಆದಿದ್ರಾವಿಡ, ಆದಿಆಂಧ್ರ ಕೇವಲ ಕೆಲವು ಜಿಲ್ಲೆಗಳಲ್ಲಿ ಮಾತ್ರ ಇವೆ. ಈ ಎಲ್ಲದರ ವಾಸ್ತವಿಕತೆ ಪರಿಗಣಿಸಿ ಬಹು ಸಂಖ್ಯೆಯಲ್ಲಿರುವ ಮಾದಿಗ ಸಮಯದಾಕ್ಕೆ ಒಳಮೀಸಲಾತಿ ಪಾಲು ಶೇಕಡ 6.5 ದೊರೆಯಲು ಪೂರಕವಾಗಿ ವರದಿ ನೀಡಬೇಕು ಎಂದು ಮನವಿ ಮಾಡಿದರು.

ಮಾದಿಗ ಸಮಾಜದ ಪ್ರಧಾನ ಕಾರ್ಯದರ್ಶಿ ದೊಡ್ಡಘಟ್ಟ ಗಂಗರಾಜು ಮಾತನಾಡಿ, ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರು ಸರ್ಕಾರಕ್ಕೆ ಪೂರಕ ವರದಿ ಸಲ್ಲಿಸಿ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸುವ ನಂಬಿಕೆ ನಮ್ಮ ಸಮಾಜದಲ್ಲಿದೆ ಎಂದರು.

ಬೀರೂರು ಎನ್.ಗಿರೀಶ್, ಹುಲ್ಲೇಹಳ್ಳಿ ಲಕ್ಷ್ಮಣ್, ಬಿ.ಜಿ.ಮೈಲಾರಪ್ಪ, ಕೆದೀಗೆರೆ ಚಂದ್ರಪ್ಪ, ಮಲ್ಲೇಶ್ವರದ ತಿಮ್ಮಯ್ಯ, ಬಳ್ಳೇಕೆರೆ ಸಂತೋಷ ಇದ್ದರು.