ತೇರದಾಳ ಪಟ್ಟಣದ ಬಸ್ ನಿಲ್ದಾಣ ಬಳಿಯ ಪುರಸಭೆ ಹಳೇ ಕಟ್ಟಡಕ್ಕೆ ಸ್ಥಳಾಂತರಗೊಂಡಿರುವ ಉಪನೋಂದಣಿ ಕಚೇರಿಗೆ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು. ಜಿಲ್ಲಾ ಉಪನೋಂದಣಾಧಿಕಾರಿ ಶಂಕರಗೌಡ ನ್ಯಾಮಗೌಡ, ತಹಸೀಲ್ದಾರ್ ಡಿ.ಎ. ಹೂಗಾರ ಇತರರಿದ್ದರು, 
ಜಿಲ್ಲೆ

ಹೊಸ ತಂತ್ರಾಂಶದ ಮಾಹಿತಿ ನೀಡಿ

ದತ್ತಾತ್ರೇಯ ಪಿ ಕುಲಕರ್ಣಿ

ತೇರದಾಳ: ಪಟ್ಟಣದ ನಾಡ ಕಚೇರಿಯಲ್ಲಿದ್ದ ಉಪನೋಂದಣಿ ಕಚೇರಿಯನ್ನು ಬಸ್ ನಿಲ್ದಾಣ ಬಳಿಯ ಪುರಸಭೆ ಹಳೇ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಹೊಸ ಕಚೇರಿಯಲ್ಲಿ ನೂತನ ಕಾವೇರಿ 2.0 ತಂತ್ರಾಂಶಕ್ಕೆ ಶಾಸಕ ಸಿದ್ದು ಸವದಿ ಗುರುವಾರ ಚಾಲನೆ ನೀಡಿ ಮಾತನಾಡಿ, ನಾಡ ಕಚೇರಿ ಮುಂದೆ ಜನದಟ್ಟನೆಯಾಗಿ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಆಗುತ್ತಿತ್ತು.ಸಾರ್ವಜನಿಕರ ಬೇಡಿಕೆಯಂತೆ ಉಪನೋಂದಣಿ ಕಚೇರಿಯನ್ನು ಪುರಸಭೆ ಹಳೇ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ ಎಂದರು.

ರೈತರು, ಸಾರ್ವಜನಿಕರ ಕೆಲಸವನ್ನು ಸುಗಮವಾಗಿ ನೆರವೇರಿಸಲು ಹೊಸ ತಂತ್ರಾಂಶ ಅಳಡಿಸಲಾಗಿದೆ. ಕಾವೇರಿ 2.0 ಕುರಿತು ಜನರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ವಿರಕ್ತಮಠದ ಶಿವಕುಮಾರ ದೇವರು ಸಾನ್ನಿಧ್ಯ ವಹಿಸಿದ್ದರು.

ಜಿಲ್ಲಾ ಉಪನೋಂದಣಾಧಿಕಾರಿ ಶಂಕರಗೌಡ ನ್ಯಾಮಗೌಡ, ತಹಸೀಲ್ದಾರ್ ಡಾ. ದೊಡ್ಡಪ್ಪ ಹೂಗಾರ, ಸ್ಥಳೀಯ ನೋಂದಣಾಧಿಕಾರಿ ಎಸ್.ಪಿ. ಮುತ್ತಪ್ಪಗೋಳ, ಪ್ರವೀಣ ನಾಡಗೌಡ, ಅಶೋಕ ಆಳಗೊಂಡ, ಅಪ್ಪು ಮಂಗಸೂಳಿ, ಅಲ್ಲಪ್ಪ ಮದಲಮಟ್ಟಿ, ಶಂಕರ ಕುಂಬಾರ, ಸುರೇಶ ಕಬಾಡಗಿ, ಭುಜಬಲಿ ಕೆಂಗಾಲಿ, ಎಸ್.ಬಿ. ಕಾಂಬಳೆ, ಎಸ್.ಬಿ. ಮಾಯನ್ನವರ, ಭರಮು ಉಳ್ಳಾಗಡ್ಡಿ, ಪ್ರಭಾಕರ ಬಾಗಿ, ಷಣ್ಮುಖ ಗಾಡದಿ, ನೇಮಣ್ಣ ಸಾವಂತನವರ, ಸದಾಶಿವ ಹೊಸಮನಿ ಇತರರಿದ್ದರು.