ಜಿಲ್ಲೆ

ಕಾರ್ವಿುಕರಿಗೆ ಸೌಲಭ್ಯಗಳ ಮಾಹಿತಿ ಒದಗಿಸಲಿ

ಕುಮಟಾ: ಕಾರ್ವಿುಕ ಇಲಾಖೆಯಡಿ ಲಭ್ಯವಿರುವ ಯಾವುದೇ ಸೌಲಭ್ಯದಿಂದ ಸಂಘಟಿತ ಹಾಗೂ ಅಸಂಘಟಿತ ಕಾರ್ವಿುಕರು ವಂಚಿತರಾಗಬಾರದು. ಕಾರ್ವಿುಕ ಇಲಾಖೆಯ ನೀತಿನಿಯಮಗಳು, ಸವಲತ್ತುಗಳ ಬಗ್ಗೆ ಕಾಲಕಾಲಕ್ಕೆ ಕಾರ್ವಿುಕರಿಗೆ ಮಾಹಿತಿ ಒದಗಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.

ಶುಕ್ರವಾರ ಕಾರ್ವಿುಕ ಇಲಾಖೆಯ ಕಾರ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ದಿನಕರ ಶೆಟ್ಟಿ ಕಾರ್ವಿುಕ ಅಧಿಕಾರಿ ವೆಂಕಟೇಶ ಅವರಿಂದ ಯೋಜನೆಗಳು ಹಾಗೂ ಫಲಾನುಭವಿಗಳ ಸಮಗ್ರ ಮಾಹಿತಿ ಪಡೆದರು.

ಕಾರ್ವಿುಕ ಸಂಘಟನೆಗಳ ಸಹಕಾರದಲ್ಲಿ ವಿವಿಧ ಯೋಜನೆಯ ಅರ್ಜಿ ಸಲ್ಲಿಸುವುದಕ್ಕೆ ಮಾತ್ರ ಅವಕಾಶವಿದೆ. ಕಟ್ಟಡ ಕಾರ್ವಿುಕರ ಹೊರತಾದ ಇತರೆಲ್ಲ ಅಸಂಘಟಿತ ಕಾರ್ವಿುಕರಿಗೆ ಸ್ಮಾರ್ಟಕಾರ್ಡ್​ಗಳು ಬಂದಿದ್ದು ವಿತರಿಸಲಾಗುತ್ತಿದೆ. ಕಾರ್ವಿುಕರಿಗೆ ಸರಿಯಾದ ಮಾಹಿತಿ ನೀಡಲಾಗುತ್ತಿದೆ ಎಂದು ವೆಂಕಟೇಶ ತಿಳಿಸಿದರು.

ಪ್ರತಿಯೊಬ್ಬ ಅರ್ಹ ಕಾರ್ವಿುಕರಿಗೆ ಸರ್ಕಾರದ ಯೋಜನೆಯ ಲಾಭ ಸಿಗಬೇಕು, ಆಮೂಲಕ ಅವರ ಬದುಕನ್ನು ಎತ್ತರಿಸಿಕೊಳ್ಳುವುದಕ್ಕೆ ಇಲಾಖೆಯ ಕಾರ್ಯವೈಖರಿ ಪೂರಕವಾಗಿರಬೇಕು. ಮಧ್ಯವರ್ತಿಗಳ ಕಿರುಕುಳವಾಗದಂತೆ ಎಚ್ಚರವಹಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ ಕಟ್ಟುನಿಟ್ಟಾಗಿ ಸೂಚಿಸಿದರು.

ಈ ವೇಳೆ ಗ್ರಾಮೀಣ ಕುಡಿಯುವ ನೀರು ವಿಭಾಗದ ಇಂಜಿನಿಯರ್ ರಾಘವೇಂದ್ರ ನಾಯ್ಕ, ಶ್ರೀಧರ ಭಟ್ ಇತರರು ಇದ್ದರು.