ಸಂಡೂರು: ಆರೋಗ್ಯ ಕೇಂದ್ರದ ಸಿಬ್ಬಂದಿ ತುರ್ತು ಸಂದರ್ಭದಲ್ಲಿ ರೋಗಿಗೆ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ತಾಲೂಕು ಇಲ್ಲವೆ ಜಿಲ್ಲಾ ಆಸ್ಪತ್ರೆಗೆ ಶಿಫಾರಸು ಮಾಡಬೇಕು ಎಂದು ಡಿಎಚ್‌ಒ ಡಾ.ವೈ.ರಮೇಶ್ ಬಾಬು ಹೇಳಿದರು.
ತೋರಣಗಲ್ ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ ಹತ್ತು ಅಮೃತ ವಾಹಿನಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶುಕ್ರವಾರ ಮಾತನಾಡಿದರು. ಸೂಕ್ತ ಔಷಧ ಸಂಗ್ರಹ, ವಿತರಣೆ ಸರಿಯಾಗಿ ನಿರ್ವಹಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು. ಆರೋಗ್ಯಯುತ ಮಕ್ಕಳಿಗಾಗಿ ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಬೇಕು ಎಂದರು.
ಆಡಳಿತ ವೈದ್ಯಾಧಿಕಾರಿ ಗೋಪಾಲ್ ರಾವ್, ವೈದ್ಯರಾದ ರಾಘವೇಂದ್ರ, ಶಾಂತಯ್ಯ, ಶ್ವೇತಾ, ವಿಜಯಲಕ್ಷ್ಮೀ, ಅಶ್ವಿನಿ, ಶ್ರುತಿ, ಸಿಬ್ಬಂದಿ ಆಸೀಫ್, ಪ್ರಮುಖರಾದ ಚೈತ್ರಾ, ರಶ್ಮಿ, ಲತಾ, ಜ್ಯೋತಿ, ನಂದಿನಿ, ರಮೇಶ್ ಇತರರಿದ್ದರು.