ಮಾನ್ವಿ: ಪಟ್ಟಣದ ಪುರಸಭೆ ಆವರಣದಲ್ಲಿ ಶುಕ್ರವಾರ ರಾಜ್ಯಪೌರ ಸೇವಾ ನೌಕರರ ಸೇವ ಸಂಘ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ಇದನ್ನೂ ಓದಿ: ಪುರಸಭೆ ಎದುರು ಅನಿರ್ದಿಷ್ಟಾವಧಿ ಮುಷ್ಕರ
ತಾಲೂಕು ಘಟಕದ ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ಸವಲತ್ತುಗಳನ್ನು ಪೌರಸೇವಾ ನೌಕರರಿಗೂ ಪ್ರತ್ಯೇಕವಾದ ಅದೇಶವಿಲ್ಲದೆ ವಿಸ್ತರಿಸಬೇಕು. ದೀನಗೂಲಿ ನೌಕರರನ್ನು ಸಕ್ರಮಾತಿಗೊಳಿಸಬೇಕು.
ನಗರ ಸಭೆಗಳಲ್ಲಿ ಶೇ.100 ರಷ್ಟು ಪೌರ ಕಾರ್ಮಿಕರನ್ನು ವಿಶೇಷ ನೇಮಕಾತಿ ಅಡಿಯಲ್ಲಿ ನೇಮಮಾಡಿ. 2022ರಲ್ಲಿ ಶೇಷ ನೇಮಕಾತಿ ಅಡಿಯಲ್ಲಿ ನೇಮಕಾತಿ ಹೊಂದಿದ ಪೌರಕಾರ್ಮಿಕರು ಹಾಗೂ ಲೋಡರ್ಸ್, ಎಸ್.ಎಫ್.ಸಿ. ವೇತನ ನಿಧಿಯಿಂದ ವೇತನ ಪಾವತಿಸಬೇಕು,
ನೀರು ಸರಬರಾಜು ನೌಕರರನ್ನು ವಿಶೇಷ ನೇಮಕಾತಿ ಅಡಿಯಲ್ಲಿ ಪರಿಗಣಿಸಬೇಕು, ಪೌರ ಸೇವಾ ನೌಕರರಿಗೆ ಜ್ಯೋತಿ ಸಂಜೀವಿನಿ ಅಡಿಯಲ್ಲಿ ನಗದು ರಹಿತ ಚಿಕಿತ್ಸಾ ಸೌಲಭ್ಯ ಕಲ್ಪಿಸಬೇಕು. ಐ.ಟಿ. ಸಿಬ್ಬಂದಿ, ಅಕೌಂಟ್ ಕನ್ಸ್‌ಲ್ ಟೆಂಟ್, ಕಂಪ್ಯೂಟರ್ ಅಪರೇಟರ್, ವಾಹನ ಚಾಲಕರನ್ನು ಇತರೆ ನೌಕರರನ್ನು ಪೌರಸೇವ ನೌಕರರೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಗೌರವಾಧ್ಯಕ್ಷ ಮಹೇಶಕುಮಾರ, ಉಪಾಧ್ಯಕ್ಷರಾದ ಶೇಕ್ಷವಾಲಿ, ಪ್ರಮುಖರಾದ ಜೆ.ಹುಲಿಗೆಪ್ಪ, ಹನುಮಂತಮ್ಮ, ಈರಣ್ಣ, ಜಾಫರ್, ಸೈಯಾದ್ ಪೀರ್‌ಪಾಷಾ, ಹನುಮೇಶ ದಾಪೆದರ, ಅಜಗರ್, ವಿಜಯಕುಮಾರ, ರಾಜಯಲ್ಲಪ್ಪ, ವೆಂಕಟೇಶ, ರಮೇಶ ಇತರರಿದ್ದರು.