ಲೋಕಾಪುರದ ನಾಡಕಚೇರಿ ಎಜಿಎಸ್‌ಕೆ ಕೇಂದ್ರಕ್ಕೆ ಜಮಖಂಡಿ ಎಸಿ ಶ್ವೇತಾ ಬೀಡಿಕರ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು. ಉಪತಹಸೀಲ್ದಾರ್ ಸತೀಶ ಬೇವೂರ, ನಾಡಕಚೇರಿ ಸಿಬ್ಬಂದಿ ಇದ್ದರು. 
ಜಿಲ್ಲೆ

ಗ್ರಾಮೀಣರಿಗೆ ಕಾಲಮಿತಿಯಲ್ಲೇ ಸೌಲಭ್ಯ ಒದಗಿಸಿ

Vijayapura - Desk - Gurappa Lokuri

ಲೋಕಾಪುರ: ಗ್ರಾಮೀಣ ಭಾಗದ ಜನರಿಗೆ ಕಾಲಮಿತಿಯಲ್ಲಿ ಸರ್ಕಾರ ಸೇವೆ ನೀಡಲು ನಾಡ ಕಚೇರಿ ಕೆಲಸ ಚುರುಕುಗೊಳಿಸಲಾಗುವುದೆಂದು ಜಮಖಂಡಿ ಎಸಿ ಶ್ವೇತಾ ಬೀಡಿಕರ ಹೇಳಿದರು.

ಪಟ್ಟಣದ ನಾಡಕಚೇರಿ ಎಜಿಎಸ್‌ಕೆ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಅವರು ಮಾತನಾಡಿದರು.

ರೈತರು ಆಯಾ ನಾಡಕಚೇರಿಯಲ್ಲಿ ಪಹಣಿ ಪಡೆಯುವುದನ್ನು ಸರಳಿಕರಿಸಿ, ಎಲ್ಲ ಕಡೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಪಹಣಿಗಳಲ್ಲಿನ ದೋಷ ಸರಿಪಡಿಸಲಾಗಿದೆ. ನಾಡ ಕಚೇರಿಯಲ್ಲಿನ ಅಂತರ್ಜಾಲ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ಸಿಬ್ಬಂದಿ ಹಾಜರಾತಿ ಹಾಗೂ ವಿವಿಧ ಸೌಲಭ್ಯ ಕೋರಿ ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳ ವಿಲೇವಾರಿ ಪ್ರಗತಿ ಪರೀಶಿಲಿಸಿದರು. ಅಲ್ಲದೆ, ಸಾರ್ವಜನಿಕರಿಗೆ ಒದಗಿಸುವ ಸೌಲಭ್ಯಗಳ ಕುರಿತ ಕಡತಗಳನ್ನು ವೀಕ್ಷಿಸಿ, ಕಾಲಮಿತಿಯೊಳಗೇ ಸೌಲಭ್ಯ ತಲುಪಿಸಬೇಕೆಂದು ಸೂಚಿಸಿದರು.

ಉಪತಹಸೀಲ್ದಾರ್ ಸತೀಶ ಬೇವೂರ, ಗ್ರಾವ ಆಡಳಿತಾಧಿಕಾರಿ ಆಯಿಷಾ ಬೇಗಂ, ಗ್ರಾಮಲೆಕ್ಕಾಧಿಕಾರಿ ಅಪ್ಪಾಸಿ ಸೂರ‌್ಯವಂಶಿ ನಾಡಕಚೇರಿ ಸಿಬ್ಬಂದಿ ಇದ್ದರು.