ಹುಬ್ಬಳ್ಳಿ: ನವನಗರದಲ್ಲಿರುವ ಕಾಯಂ ಪೌರಕಾರ್ಮಿಕರ ನಿವೇಶನಗಳಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಜೈ ಭೀಮ ಯುವ ಶಕ್ತಿ ಸೇನಾ ಪದಾಧಿಕಾರಿಗಳು, ನಗರದಲ್ಲಿ ಬುಧವಾರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಗುಣಮಟ್ಟದ ರಸ್ತೆ, ಕುಡಿಯುವ ನೀರು, ವಿದ್ಯುತ್, ಖರೀದಿ ನೋಂದಣೀ ಸೇರಿದಂತೆ ಇತರ ಸೌಲಭ್ಯ ಒದಗಿಸಿಕೊಡಬೇಕು. ವರ್ಷದ ಹಿಂದೆ ಇದೇ ಸಮಸ್ಯೆಯನ್ನು ತಮ್ಮ ಗಮನಕ್ಕೆ ತರಲಾಗಿತ್ತು. ಆದರೂ ಕ್ರಮ ಜರುಗಿಸಿಲ್ಲ. ಆದ್ದರಿಂದ ಕೂಡಲೇ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಜಿಲ್ಲಾಧ್ಯಕ್ಷ ಹರೀಶ ಗುಂಟ್ರಾಳ, ಪ್ರಮುಖರಾದ ರಮೇಶ ಹಿರೇಮನಿ, ಗುರುನಾಥ ಮೊರಬದ, ರವಿ ಬೇತಾಪಲ್ಲಿ, ಗೌಡಪ್ಪ ಪೊಲೀಸ್ ಪಾಟೀಲ, ಪರಶುರಾಮ ಛಲವಾದಿ, ಬಸವರಾಜ ನಾಗಲಾಪುರ, ಶ್ರೀನಿವಾಸ ಬೆಳಡೊಣಿ, ಅಜರ್ ಮುಲ್ಲಾ, ವಿನೋದ ಸಿದ್ಧಾಪುರ, ನಿಯಾಜ್ ಬೇಪಾರಿ, ಮಮತಾ ಬಳವಂಕರ, ಶಂಕರ ಕಟ್ಟಿಮನಿ, ಮಂಜು ಛಲವಾದಿ, ಮುಜಾಫರ್ ಬಹದ್ದೂರ, ಸಂತೋಷ ನಿರೂಮನಿ, ರೇಣುಕಾ ಮಡಿವಾಳರ, ಗೋವಿಂದ ಬಂದಮಿಂದಪಲ್ಲಿ, ಮಂಜು ಗೌಡರ, ಕಮಲಮ್ಮ ಗುರಗುಂಟಿ, ಓಬಳಮ್ಮ ಮರ್ತಾಡ ಇತರರಿದ್ದರು.