ಜಿಲ್ಲೆ

ಅಲೆಮಾರಿ, ಅರೆ ಅಲೆಮಾರಿ ಜನರಿಗೆ ಸೌಲಭ್ಯ ಒದಗಿಸಿ

Vijayanagara - Veerendra

ವಿಮುಕ್ತ ಬುಡಕಟ್ಟುಗಳ ಒಕ್ಕೂಟದಿಂದ ಡಿಸಿಗೆ ಮನವಿ

 ಹೊಸಪೇಟೆ: ವಿವಿಧ ಸೌಲಭ್ಯ ಜಾರಿಗೆ ಒತ್ತಾಯಿಸಿ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟ ಒತ್ತಾಯಿಸಿದೆ.

ಈ ಕುರಿತು ಒಕ್ಕೂಟದ ಪದಾಧಿಕಾರಿಗಳು ಶನಿವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ವಿಜಯನಗರ ಜಿಲ್ಲಾದ್ಯತಂ ವಿವಿಧೆಡೆ ನೆಲೆಸಿರುವ ನೂರಾರು ಅಲೆಮಾರಿ, ಅರೆ ಅಲೆಮಾರಿ ಕುಟುಂಬಗಳಿಗೆ ಇಂದಿಗೂ ಸ್ವಂತ ಸೂರಿಲ್ಲದೇ, ಟೆಂಟ್‌ಗಳಲ್ಲಿ ವಾಸವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಜನರಿಗೆ ಆಶ್ರಯ ಯೋಜನೆಯಡಿ ಮನೆಗಳನ್ನು ಒದಗಿಸಬೇಕು. ಈಗಾಗಲೇ ಸರ್ಕಾರಿ ಜಾಗೆಯಲ್ಲಿ ವಾಸವಾಗಿದ್ದರೆ, ಹಕ್ಕು ವಿತರಣೆಗೆ ಕ್ರಮ ಜರುಗಿಸಬೇಕು.

ಸರ್ಕಾರದ ವಸತಿ ಯೋಜನೆ ಅಡಿಯಲ್ಲಿ ನಿವೇಶನ ಇರುವ ಅಲೆಮಾರಿಗಳಿಗೆ ಸರ್ಕಾರದಿಂದ ಮನೆ ಕಟ್ಟಿಸಿಕೊಡಬೇಕು. ಅಲೆಮಾರಿ ಜನಾಂ ಗದವರು ತಮ್ಮ ಉಪಜೀವನ ಮಾಡಲು ಭೂ ಒಡೆತನ ಯೋಜನೆಯಡಿ ಸರ್ಕಾರದ ಆದೇಶದಂತೆ ಪ್ರತಿಯೊಂದು ಕುಟುಂಬಕ್ಕೆ ಎರಡು ಎಕರೆ ಭೂಮಿ ಒದಗಿಸಬೇಕು. ಅಲೆಮಾರಿ ಮಕ್ಕಳ ವಿದ್ಯಬ್ಯಾಸಕ್ಕಾಗಿ ವಸತಿ ಶಾಲೆಗಳಲ್ಲಿ ಪ್ರತ್ಯೇಕ ಮೀಸಲಾತಿ, ಹೊಸಪೇಟೆ ನಗರದ ಬುಡ್ಗ ಜಂಗಮ ಕಾಲೋನಿಯಲ್ಲಿ ಅಲೆಮಾರಿ ಗ್ರಂಥಾಲಯಕ್ಕೆ ನಿವೇಶನ ಮಂಜೂರು ಮಾಡಿ, ಕಟ್ಟಡ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಅಲೆಮಾರಿ ಜನಾಂಗದವರಿಗೆ ಸರ್ಕಾರದ ವಿವಿಧ ಯೋಜನೆಗಳಲ್ಲಿ ಆರ್ಥಿಕ ಸಹಾಯ ನೀಡಬೇಕು. ಅಲೆಮಾರಿ ಜನಾಂಗದವರಿಗೆ ಸರ್ಕಾರದಿಂದ ವೃದ್ಧಾಪ್ಯವೇತನ, ಪಿಂಚಣಿ, ಅಂಗವಿಕಲರ ವೇತನ, ಕಲಾವಿದರ ಮಾಶಾಸನ ಯೋಜನೆಗಳನ್ನು ನೀಡಬೇಕು.

ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಸಣ್ಣ ಮಾರೆಪ್ಪ, ಜಿಲ್ಲಾ ಉಪಾಧ್ಯಕ್ಷರಾದ ಕಿನ್ನೂರಿ ಶೇಖಪ್ಪ, ಜೆ.ರಮೇಶ್, ಸಿದ್ದು ಬೆಳಗಲ್, ಜಿಲ್ಲಾ ಸಹ ಕಾರ್ಯದರ್ಶಿ ಪಕ್ಕೀರಪ್ಪ ಬಾದಿಗಿ ಇದ್ದರು.