ಚಿಮ್ಮಡ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ನೂತನ ಯುವ ಪದಾಧಿಕಾರಿಗಳ ಸತ್ಕಾರ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳನ್ನು ಸತ್ಕರಿಸಲಾಯಿತು. ಉಮೇಶ ಪೂಜಾರಿ, ಅಶೋಕ ಧಡೂತಿ, ಮಹಾಲಿಂಗ ಮಾಯನ್ನವರ, ಅಶೋಕ ಮೋಟಗಿ, ಮಹಾಲಿಂಗ ಬಳಗಾರ, ಶ್ರೀಶೈಲ ಮಠಪತಿ, ಅಶೋಕ ನಾವಿ ಮತ್ತಿತರರಿದ್ದಾರೆ.  
ಜಿಲ್ಲೆ

ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಿ

ವಿನಯ ಆಶೋಕ ನಾಯ್ಕ

ಚಿಮ್ಮಡ: ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಅರ್ಹ ಲಾನುಭವಿಗಳಿಗೆ ತಲುಪಿಸಿ ತಮಗೆ ಮತ ನೀಡಿರುವ ಮತದಾರರ ಋಣ ತೀರಿಸಬೇಕೆಂದು ಕಾಂಗ್ರೆಸ್ ಗ್ರಾಮ ಘಟಕದ ಅಧ್ಯಕ್ಷ ಉಮೇಶ ಪೂಜಾರಿ ಹೇಳಿದರು.

ಗ್ರಾಮದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ನೂತನ ಯುವ ಪಧಾದಿಕಾರಿಗಳ ಸತ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಘಟಾನುಘಟಿ ನಾಯಕರು ಕೂಡ ಇಂತಹ ಚುನಾವಣೆಗಳ ಮೂಲಕವೇ ರಾಜಕೀಯ ಪ್ರವೇಶ ಮಾಡಿದ್ದಾರೆ. ನಿಮ್ಮ ಮುಂದಿನ ರಾಜಕೀಯ ಭವಿಷ್ಯ ಕೂಡ ಉಜ್ವಲವಾಗಲಿದೆ ಎಂದರು.

ಗ್ರಾಪಂ ಮಾಜಿ ಉಪಾಧ್ಯಕ್ಷ ಅಶೋಕ ಧಡೂತಿ ಮಾತನಾಡಿ, ಆಂತರಿಕ ಚುನಾವಣೆಯಲ್ಲಿ ಗೆದ್ದಿರುವ ಹಾಗೂ ಸೋತಿರುವ ಅಭ್ಯರ್ಥಿಗಳು ನಮ್ಮವರೇ ಆಗಿರುವುದರಿಂದ ಎಲ್ಲರನ್ನು ವಿಸ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಬೇಕು ಎಂದರು.

ಗ್ರಾಪಂ ಸದಸ್ಯ ಮಹಾಲಿಂಗ ಮಾಯನ್ನವರ ಮಾತನಾಡಿದರು. ಯುವ ಕಾಂಗ್ರೆಸ್ ಚುನಾವಣೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಸೂರಜ ಅವಟಿ, ಬಾಗಲಕೋಟೆ ಜಿಲ್ಲೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಜಯಕುಮಾರ ಬಾಳಪ್ಪಾ ಗಾಣಿಗೇರ, ಸುನೀಲ ಹರಿಜನ, ತೇರದಾಳ ಮತಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತರಾದ ಪ್ರವೀಣ ಪೂಜಾರಿ ಅವರನ್ನು ಸತ್ಕರಿಸಲಾಯಿತು.

ಅಶೋಕ ಮೋಟಗಿ, ಮಹಾಲಿಂಗ ಬಳಗಾರ, ಶ್ರೀಶೈಲ ಮಠಪತಿ, ಅಶೋಕ ನಾವಿ, ಮಲ್ಲಿಕಾರ್ಜುನ ಬಳಗಾರ, ಪ್ರಭು ಬಿದರಿ, ಪಿರಸಾಬ ನದಾ, ರವಿ ದೊಡವಾಡ ಮತ್ತಿತರರಿದ್ದರು.