ಹುಬ್ಬಳ್ಳಿ: ಗಣೇಶ ವಿಗ್ರಹಗಳ ವಿಸರ್ಜನೆಗೆ ಸಂಬಂಧಿಸಿದಂತೆ ನಗರದ ವಿವಿಧೆಡೆ ಇರುವ ವಿಸರ್ಜನಾ ಬಾವಿಗಳನ್ನು ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ನಿಯೋಗ ಸೋಮವಾರ ವೀಕ್ಷಿಸಿತು.
ಇಂದಿರಾಗಾಜಿನ ಮನೆ (ವಲಯ ಕಚೇ 9) ಆವರಣ, ಹೊಸೂರಿನಲ್ಲಿರುವ (16ನೇ ನಂ. ಶಾಲೆ) ಶ್ರೀ ಗಣೇಶ ವಿಸರ್ಜನಾ ಬಾವಿಗಳನ್ನು ಪರಿಶೀಲನೆ ಮಾಡಿದರು.
ಈ ಎರಡೂ ಬಾವಿಗಳಲ್ಲಿ ದೊಡ್ಡ ದೊಡ್ಡ ಗಣೇಶ ವಿಗ್ರಹಗಳನ್ನು ವಿಸರ್ಜನೆ ಮಾಡಲಾಗುತ್ತಿದೆ. ಬಾವಿಯಲ್ಲಿ ನೀರಿಲ್ಲ, ವಿದ್ಯುತ್ ಸೌಕರ್ಯವಿಲ್ಲ. ವಿಸರ್ಜನೆ ವೀಕ್ಷಿಸಲು ಸಾರ್ವಜನಿಕರಿಗೆ ಆಸನದ ವ್ಯವಸ್ಥೆ ಮಾಡಿಲ್ಲ. ಕ್ರೇನ್ ವ್ಯವಸ್ಥೆ, ಗುಂಡಿ ಮುಚ್ಚುವುದು, ಈಜುಗಾರರ ನೇಮಕ ಮಾಡಬೇಕು. ಬಾವಿ ಸುತ್ತಲಿನ ಕಾಂಪೌಂಡ್ ಹಾಳಾಗಿವೆ. ಸ್ವಚ್ಛತೆ ಮಾಡದೇ ಇರುವುದರಿಂದ ಅನನುಕೂಲತೆ ಎದ್ದು ಕಾಣುತ್ತಿದೆ. ಕೂಡಲೇ ಮಹಾನಗರಪಾಲಿಕೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ನಿಯೋಗ ಒತ್ತಾಯಿಸಿತು.
ಮಹಾಮಂಡಳದ ಅಧ್ಯಕ್ಷ ಮೋಹನ ಲಿಂಬಿಕಾಯಿ ಮಾತನಾಡಿದರು. ನಿಯೋಗದಲ್ಲಿ ಶಾಂತರಾಜ ಪೋಳ, ಅಮರೇಶ ಹಿಪ್ಪರಗಿ, ಅನಿಲ ಬೇವಿನಕಟ್ಟಿ, ಮಹೇಶ ಶೇಟ್, ಡಾ. ಚಿದಾನಂದ ತೆಗ್ಗಿಹಳ್ಳಿ, ಈಶ್ವರ ನಾಯ್ಕರ, ಎಂ.ಎಸ್. ಶಿರಿಗಣ್ಣನವರ, ಮೃತ್ಯುಂಜಯ ಮಟ್ಟಿ, ಶಿವಕುಮಾರ ಹಿರೇಮಠ, ಚನ್ನಬಸಪ್ಪ ಧಾರವಾಡಶೆಟ್ರು, ಪ್ರಮೋದ ಬದ್ದಿ, ಇತರರು ಇದ್ದರು.