ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿನ ಕೆರೆ ತುಂಬಿಸಿ ಜನರಿಗೆ ಸಮರ್ಪಕ ಕುಡಿಯುವ ನೀರು ಒದಗಿಸಬೇಕು ಎಂದು ಒತ್ತಾಯಿಸಿ ರಾಯಚೂರಿನ ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆಗೆ ಕರ್ನಾಟಕ ರಾಜ್ಯ ರೈತ ಸಂಘದಿಂದ ಸೋಮವಾರ ಮನವಿ ಸಲ್ಲಿಸಲಾಯಿತು. ಅಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಪದಾಕಾರಿಗಳಾದ ನರಸಪ್ಪ ಯಾದವ್, ನರಸಿಂಗರಾವ್, ಅಬ್ದುಲ್ ಮಜೀದ್, ಅಕ್ಕಮ್ಮ, ರಮೇಶ ಗಾಣಧಾಳ, ಪ್ರಭಣ್ಣ ಸಾಹುಕಾರ, ಹಂಪಮ್ಮ ಇದ್ದರು. 
ಜಿಲ್ಲೆ

ಹೊಕ್ರಾಣಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಿ

ರಾಚಯ್ಯ ಸ್ವಾಮಿ

ರಾಯಚೂರು: ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿನ ಕೆರೆಯನ್ನು ತುಂಬಿಸುವ ಮೂಲಕ ಗ್ರಾಮಸ್ಥರಿಗೆ ಸಮರ್ಪಕ ಕುಡಿಯುವ ನೀರು ಒದಗಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಒತ್ತಾಯಿಸಿದೆ.
ಸಂಘದ ನಿಯೋಗ ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆಗೆ ಸೋಮವಾರ ಮನವಿ ಸಲ್ಲಿಸಿ, ಕೆರೆಯಲ್ಲಿ ನೀರಿನ ಸಂಗ್ರಹ ಕಡಿಮೆಯಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುವ ಸಾಧ್ಯತೆಯಿದ್ದು, ಕೆರೆ ತುಂಬಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾಲುವೆಗೆ 25 ಗಂಟೆಗಳ ಕಾಲ ನೀರು ಹರಿಸಿದರೂ ಕೆರೆಯಲ್ಲಿ ಕೇವಲ 6 ಅಡಿ ನೀರು ಮಾತ್ರ ಶೇಖರಣೆಯಾಗಿದೆ. ಕಾಲುವೆಯಿಂದ ಕೆರೆಗೆ ಒಂದು ಅಡಿ ಪೈಪ್ ಅಳವಿಡಿಸಿದ್ದರಿಂದ ಕೆರೆ ತುಂಬಲು ಸಾಧ್ಯವಾಗಿದ್ದು, ಅದೇ ಪೈಪ್ ಪಕ್ಕದಲ್ಲಿ ಮತ್ತೊಂದು ಪೈಪ್ ಅಳವಡಿಸಿ ಕೆರೆ ತುಂಬಿಸಬೇಕು.
ಕೆರೆಯಲ್ಲಿ ನೀರು ಆಳದಲ್ಲಿದ್ದು, ಜನರು ನೀರು ತುಂಬಿಕೊಂಡು ಬರಲು ಕಷ್ಟಕವಾಗಿದೆ. ಕೆರೆ ಪಕ್ಕದಲ್ಲಿರುವ ಟ್ಯಾಂಕ್ ತುಂಬಿಸಿ ನಳ ಅಳವಡಿಸಿದರೆ ಜನರು ನೀರು ತೆಗೆದುಕೊಂಡು ಹೋಗಲು ಅನುಕೂಲವಾಗಲಿದೆ. ಜತೆಗೆ ಹದಗೆಟ್ಟಿರುವ ರಸ್ತೆಯನ್ನು ದುರಸ್ತಿಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಂಘದ ಅಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಪದಾಕಾರಿಗಳಾದ ನರಸಪ್ಪ ಯಾದವ್, ನರಸಿಂಗರಾವ್, ಅಬ್ದುಲ್ ಮಜೀದ್, ಅಕ್ಕಮ್ಮ, ರಮೇಶ ಗಾಣಧಾಳ, ಪ್ರಭಣ್ಣ ಸಾಹುಕಾರ, ಹಂಪಮ್ಮ, ಹುಲಿಗೆಪ್ಪ ಚಾಲಿಬೆಂಚಿ, ಚನ್ನಮ್ಮ ಇದ್ದರು.