ಮಸ್ಕಿ: ತಾಲೂಕಿನ ವಿವಿಧ ಹಳ್ಳಿಗಳಿಗೆ ಬಸ್ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕದ ಪದಾಧಿಕಾರಿಗಳು ಶನಿವಾರ ಬಸ್ ಡಿಪೋ ವ್ಯವಸ್ಥಾಪಕ ಆದಪ್ಪ ಕುಂಬಾರಗೆ ಮನವಿ ಸಲ್ಲಿಸಿದರು.
ತಾಲೂಕಿನ ಗಾಳಿದುರ್ಗಮ್ಮ ಕ್ಯಾಂಪ್, ಚಿಕ್ಕದಿನ್ನಿ, ಹಿರೇದಿನ್ನಿ, ಸುಂಕನೂರು, ದಿನ್ನಿಕ್ಯಾಂಪ್, ಮಲ್ಲದಗುಡ್ಡ, ಡೋಣಮರಡಿ ಗ್ರಾಮಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲ. ಪಟ್ಟಣ ಅಥವಾ ತೋರಣದಿನ್ನಿಗೆ ತೆರಳಲು ಆಟೋ ಇಲ್ಲವೆ ಬೈಕ್ ಅವಲಂಬಿಸಬೇಕು. ಆಸ್ಪತ್ರೆ, ಶಾಲೆ ಕಾಲೇಜುಗಳಿಗೆ ಹೋಗಲು ತೊಂದರೆ ಆಗಿದ್ದು, ಕೂಡಲೇ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು.
ಡಿಪೋ ವ್ಯವಸ್ಥಾಪಕ ಆದಪ್ಪ ಕುಂಬಾರ ಮಾತನಾಡಿ, ಗ್ರಾಮೀಣ ಭಾಗಕ್ಕೆ ಅಗತ್ಯ ಬಸ್ ಬಿಡುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಪರಿಷತ್‌ನ ತಾಲೂಕು ಅಧ್ಯಕ್ಷ ಮೌನೇಶ ಎ.ಟಿ., ಪ್ರಧಾನ ಕಾರ್ಯದರ್ಶಿ ಹುಸೇನಪ್ಪ ಇರಕಲ್, ಮಹೇಶ ನಾಯಕ, ವಿದ್ಯಾ ಸುಂಕನೂರು, ವೆಂಕಟೇಶ ಚಿಕ್ಕದಿನ್ನಿ, ಮಂಜುನಾಥ ಟಿ.ಹಿರೇದಿನ್ನಿ, ಶ್ರೀದೇವಿ ಸುಂಕನೂರು, ಸಂದೀಪ, ನಬೀಸಾಬ್ ಇತರರಿದ್ದರು.