ಬಾದಾಮಿಯ ಹರಿದ್ರಾ ತೀರ್ಥ ಹೊಂಡಕ್ಕೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಭೇಟಿ ನೀಡಿ ಪರಿಶೀಲಿಸಿದರು. ತಹಸೀಲ್ದಾರ್ ಮಧುರಾಜ, ತಾಪಂ ಇಒ ಸುರೇಶ ಕೊಕ್ಕೆರೆ, ಪುರಸಭೆ ಮುಖ್ಯಾಧಿಕಾರಿ ಬಂದೇನವಾಜ್ ಡಾಂಗೆ, ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟಿಮನಿ ಇತರರಿದ್ದರು. 
ಜಿಲ್ಲೆ

ಭಕ್ತಾದಿಗಳಿಗೆ ಮೂಲ ಸೌಲಭ್ಯ ಕಲ್ಪಿಸಿ

Vijayapura - Desk - Gurappa Lokuri

ಬಾದಾಮಿ: ಬಾದಾಮಿ- ಬನಶಂಕರಿ ದೇವಿ ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಮೂಲ ಸೌಲಭ್ಯ ಒದಗಿಸಬೇಕೆಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.

ಬನಶಂಕರಿಗೆ ಗುರುವಾರ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ಅವರು, ಜ.13 ರಂದು ಸಂಜೆ 5 ಗಂಟೆಗೆ ಮಹಾರಥೋತ್ಸವ ನಡೆಯಲಿದೆ. ಜ.14 ರಂದು ಮಕರ ಸಂಕ್ರಮಣದಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದ್ದು, ಇದಕ್ಕಾಗಿ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಜಾತ್ರೆಯಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಬೇಕೆಂದು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಹರಿದ್ರಾ ತೀರ್ಥ ಹೊಂಡ ಭರ್ತಿಯಾಗಿದ್ದು, ಭಕ್ತರ ಸ್ನಾನಕ್ಕೆ ಅನುಕೂಲವಾಗಲಿದೆ. ಬನಶಂಕರಿ ಸ್ಥಳ ಸ್ವಚ್ಛತೆಯಿಂದ ಇಡಬೇಕು. ಇದಕ್ಕಾಗಿ ಪುರಸಭೆ ಮತ್ತು ಗ್ರಾಪಂ ವತಿಯಿಂದ ಸ್ವಚ್ಛತೆ ಬಗ್ಗೆ ನಿಗಾ ಇಡಬೇಕು. ಖಾಸಗಿ ವಾಹನ ಮತ್ತು ಬಸ್ ಪಾರ್ಕಿಂಗ್ ಪರಿಶೀಲನೆ ಮಾಡಿ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.

ತಹಸೀಲ್ದಾರ್ ಮಧುರಾಜ, ತಾಪಂ ಇಒ ಸುರೇಶ ಕೊಕ್ಕೆರೆ, ಪುರಸಭೆ ಮುಖ್ಯಾಧಿಕಾರಿ ಬಂದೇನವಾಜ್ ಡಾಂಗೆ, ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟಿಮನಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವುಕುಮಾರ ಹಿರೇಮಠ, ರಜಾಕ್ ರಾಜೂರ, ಡಾ.ಎಂ.ಎಚ್. ಚಲವಾದಿ ಸೇರಿ ತಾಲೂಕುಮಟ್ಟದ ಅಧಿಕಾರಿಗಳು, ಚೊಳಚಗುಡ್ಡ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪುರಸಭೆ ಸದಸ್ಯರು ಇದ್ದರು.