ಚಿಕ್ಕಮಗಳೂರು ಶಿರಸ್ತೆದಾರ್ ಮನು ಅವರಿಗೆ ಮನವಿ ಸಲ್ಲಿಸಿದ ದಲಿತಪರ ಸಂಘಟನೆಗಳ ಮುಖಂಡರು ದಲಿತರ ಮೇಲಿನ ದೌರ್ಜನ್ಯ ತಡೆ ಸಮಿತಿಗೆ ದಲಿತಪರ ಸಂಘಟನೆಯಲ್ಲಿ ಸೇವೆ ಸಲ್ಲಿಸಿದವರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು. ವಸಂತ್ ಕುಮಾರ್, ಎಂ.ಪಿ.ಜಯರಾಮಯ್ಯ, ವಿ.ಧರ್ಮೇಶ್, ವಿನುತ್, ಅಣ್ಣಯ್ಯ, ದಂಟರಮಕ್ಕಿ ಶ್ರೀನಿವಾಸ್ ಮತ್ತಿತರರಿದ್ದರು. 
ಜಿಲ್ಲೆ

ದೌರ್ಜನ್ಯ ತಡೆ ಸಮಿತಿಗೆ ಸಂಘಟನೆಯವರಿಗೆ ಅವಕಾಶ ಕಲ್ಪಿಸಿ

ಚಿಕ್ಕಮಗಳೂರು: ದಲಿತರ ಮೇಲಿನ ದೌರ್ಜನ್ಯ ತಡೆ ಸಮಿತಿಗೆ ದಲಿತಪರ ಸಂಘಟನೆಯಲ್ಲಿ ಸೇವೆ ಸಲ್ಲಿಸಿದವರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ದಲಿತ ಸಂಘರ್ಷ ಸಮಿತಿ ಮುಖಂಡರು ಶನಿವಾರ ಶಿರಸ್ತೇದಾರ್ ಮನು ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಡಿಎಸ್‌ಎಸ್ ರಾಜ್ಯ ಸದಸ್ಯ ಕೆ.ಸಿ.ವಸಂತ್‌ಕುಮಾರ್, ಜಿಲ್ಲಾಧಿಕಾರಿ ಹಾಗೂ ಎಸ್ಪಿ ನೇತೃತ್ವದಲ್ಲಿ ಸಭೆಗಳಿಗೆ ದಲಿತ ಸಂಘದ ಪ್ರತಿ ತಾಲೂಕಿನ ಮುಖಂಡರಿಗೆ ಅವಕಾಶ ನೀಡಬೇಕು. ಆಗ ನಡೆದಿರುವ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲು ಸಹಾಯವಾಗಲಿದೆ ಎಂದರು.
ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಯುವ ಮತ್ತು ನ್ಯಾಯ ದೊರಕಿಸಿಕೊಡುವ ಉz್ದೆÃಶದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯಿದೆ ಜಾರಿಗೆ ತಂದಿರುವುದು ಸರಿಯಿದೆ. ಆದರೆ ಇತ್ತೀಚಿನ ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಆ ಕಮಿಟಿಗೆ ದಲಿತ ಪರ ಸಂಘಟನೆಗಳ ಮುಖಂಡರನ್ನು ಸದಸ್ಯರುಗಳಾಗಿ ನೇಮಕ ಮಾಡಲಾಗುತ್ತಿತ್ತು. ಆದರೆ ಸುಮಾರು ಐದು ವರ್ಷಗಳ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷದವರು ನೇಮಕ ಪಟ್ಟಿ ತಯಾರಿಸಲಾಗುತ್ತಿದೆ. ಇದರಿಂದ ದಲಿತರ ಮೇಲೆ ನಡೆಯುವ ದೌರ್ಜನ್ಯ ಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದವರು ಆಯ್ಕೆಯಾಗುತ್ತಿದ್ದಾರೆ ಎಂದು ದೂರಿದರು.
ಜನಸಂಪರ್ಕ ಇಲ್ಲದ ವ್ಯಕ್ತಿಗಳು ಸಮಿತಿಗೆ ಸದಸ್ಯರಾದರೆ ಈ ಕಾಯಿದೆಯ ಅನುಷ್ಟಾನದಲ್ಲಿ ನಿರೀಕ್ಷೆ ಮಟ್ಟದ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಸ್ವೀಕರಿಸಿರುವ ವ್ಯಕ್ತಿಗಳಲ್ಲಿ ದಲಿತಪರ ಸಂಘಟನೆಯಲ್ಲಿ ಸೇವೆ ಸಲ್ಲಿಸಿರುವವರಿಗೆ ಅವಕಾಶ ಕಲ್ಪಿಸಿ ರಾಜಕೀಯೇತರ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕರಾದ ಎಂ.ಪಿ.ಜಯರಾಮಯ್ಯ, ವಿ.ಧರ್ಮೇಶ್, ತಾಲೂಕು ಸಂಚಾಲಕರಾದ ವಿನುತ್, ಅಣ್ಣಯ್ಯ, ಮುಖಂಡರಾದ ದಂಟರಮಕ್ಕಿ ಶ್ರೀನಿವಾಸ್, ಹೊನ್ನೇಶ್, ಹುಣಸೇಮಕ್ಕಿ ಲಕ್ಷö್ಮಣ್, ಟಿ.ಎಲ್.ಗಣೇಶ್, ಹರೀಶ್‌ಮಿತ್ರ, ಜಗದೀಶ್‌ಕೋಟೆ, ರಮೇಶ್ ಮತ್ತಿತರರಿದ್ದರು.